ಮೈಸೂರು: ದಸರಾ ಸಂಭ್ರಮ (Mysuru Dasara) ಮಹೋತ್ಸವದ ನಡುವೆ ಮೈಸೂರಿನಲ್ಲಿ ವರುಣ ಎಂಟ್ರಿ ಕೊಟ್ಟಿದ್ದಾನೆ. ಮಳೆ ನಡುವೆಯೂ ಜನರು ಉತ್ಸಾಹದಿಂದ ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಂದು ಜಂಬೂ ಸವಾರಿ (Jamboo Savari) ಕಣ್ತುಂಬಿಕೊಳ್ಳುವ ಸಲುವಾಗಿ ಮೈಸೂರು ಅರಮನೆಯ ಸುತ್ತಲೂ ಕಿಕ್ಕಿರಿದು ಜನ ಸೇರಿದ್ದಾರೆ. ಈ ವೇಳೆ ಮಳೆರಾಯ ಕೂಡ ಕೃಪೆ ತೋರಿದ್ದಾನೆ. ಮಳೆ ನಡುವೆಯೇ ಮೆರವಣಿಗೆ ಸಾಗುತ್ತಿದೆ. ಜಾನಪದ ಕಲಾ ತಂಡಗಳು, ಟ್ಯಾಬ್ಲೋಗಳು ಮಳೆಯಲ್ಲೇ ಮುಂದೆ ಸಾಗುತ್ತಿವೆ. ದಸರಾ ವೀಕ್ಷಣೆಗೆಂದು ಆಗಮಿಸಿರುವ ಜನರು ಸಹ ಮಳೆಯಲ್ಲೇ ಮೆರವಣಿಗೆ ವೀಕ್ಷಿಸುತ್ತಿದ್ದಾರೆ. ಇದನ್ನೂ ಓದಿ: ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನದ ವೀಕ್ಷಣೆಗೆ ದೂರದ ಊರುಗಳಿಂದ ಜನರು
Advertisement
Advertisement
ಅಂಬಾರಿ ಕಟ್ಟುವ ಜಾಗಕ್ಕೆ ಕ್ಯಾಪ್ಟನ್ ಅಭಿಮನ್ಯುವನ್ನು ಕರೆತರಲಾಗಿತ್ತು. ಮಳೆ ಹಿನ್ನೆಲೆ ಅಂಬಾರಿ ಕಟ್ಟುವ ಜಾಗದಿಂದ ಅಭಿಮನ್ಯುವನ್ನು ನೆರಳಿಗೆ ಕರೆದುಕೊಂಡು ಹೋಗಲಾಯಿತು. ಮಳೆ ನಡುವೆಯೇ ಅಂಬಾರಿ ಕಟ್ಟುವ ಕೆಲಸ ಮುಂದುವರೆದಿದೆ. ಇದನ್ನೂ ಓದಿ: ಕಾರ್ಖಾನೆ ಕಾಮಗಾರಿ ವೇಳೆ ಗೋಡೆ ಕುಸಿತ – 7 ಕಾರ್ಮಿಕರು ದುರ್ಮರಣ
Advertisement