– ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ ಏನು?
ಬೆಂಗಳೂರು: ರಾಜ್ಯದ ವಿವಿಧೆಡೆ ಮುಂಗಾರು ಅಬ್ಬರಿಸುತ್ತಿದ್ದು, ಸಾಕಷ್ಟು ಅವಾಂತರಗಳು ಉಂಟಾಗುತ್ತಿವೆ. ಕಾರವಾರದ ಗೋವಾ-ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಕಲ್ಲುಬಂಡೆ ಕುಸಿದಿದೆ.
Advertisement
ಹೊನ್ನಾವರದ ಕರ್ನಲ್ ಹಿಲ್ ಬಳಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿದೆ. ಇಡೂರಿನಲ್ಲಿ ಗುಡ್ಡದ ನೀರು ಹರಿದು ಹೆದ್ದಾರಿ ಹಾಗೂ ಮನೆಗಳು ಜಲಾವೃತವಾಗಿದೆ. ಅರೆಬೈಲ್‌ನಲ್ಲಿ ಹೈವೇ ಮೇಲೆ ಮರ ಬಿದ್ದಿದೆ. ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಕಾರಣ ನದಿಗಳೆಲ್ಲಾ ತುಂಬಿ ಹರಿದು, ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ, ಕೇಂದ್ರದಿಂದ ಅಕ್ಕಿ ಕೊಟ್ಟರೂ ಖರೀದಿಸ್ತಿಲ್ಲ – ಜೋಶಿ ಹೊಸ ಬಾಂಬ್!
Advertisement
Advertisement
ಕೊಡಗಿನಲ್ಲಿಯೂ ಮಳೆಯಾಗುತ್ತಿದ್ದು, ಚಿಕ್ಲಿಹೊಳೆ ಡ್ಯಾಂ ತುಂಬಿ ಹರಿದಿದೆ. ಶಿರಾಡಿಘಾಟ್‌ನ ಹಲವೆಡೆ ನಿರ್ಮಾಣದ ಹಂತದ ರಸ್ತೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಅಫಜಲಪುರ ಬಳಿ ಸೇತುವೆ ಜಲಾವೃತವಾಗಿದೆ. ಮಹಾರಾಷ್ಟçದಲ್ಲಿ ಭಾರೀ ಮಳೆ ಕಾರಣ ಚಿಕ್ಕೋಡಿಯ ನಾಲ್ಕು ಸೇತುವೆ ಮುಳುಗಡೆಯಾಗಿವೆ. ಖಾನಾಪುರದ ಏಳು ಫಾಲ್ಸ್ ನೋಡಲು ಅವಕಾಶ ನೀಡದಿರುವುದಕ್ಕೆ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾಗಿವೆ. ‘ಗೋವಾದವರನ್ನು ಮಾತ್ರ ಬಿಡ್ತೀರಾ.. ಕನ್ನಡಿಗರೇನು ಮಾಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ. ಗೋಕಾಕ್ ಫಾಲ್ಸ್ ಬಳಿ ಸೂಕ್ತ ಭದ್ರತೆ ಕೈಗೊಳ್ಳದ ಕಾರಣ ಪ್ರವಾಸಿಗರು ಬಂಡೆಗಲ್ಲುಗಳ ಅಂಚಿನಲ್ಲಿ ಸೆಲ್ಫಿ ಹುಚ್ಚಾಟ ನಡೆಸಿದ್ದಾರೆ.
Advertisement
ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ
ಕೆಎಆರ್‌ಎಸ್ ಜಲಾಶಯದ ಒಟ್ಟು ಸಾಮರ್ಥ್ಯ 49.45 ಟಿಎಂಸಿ, ಇಂದಿನ ಮಟ್ಟ 24.42 ಟಿಎಂಸಿ ಇದ್ದು, ಒಳಹರಿವು 11,027 ಕ್ಯೂಸೆಕ್ ಹಾಗೂ ಹೊರಹರಿವು 562 ಕ್ಯೂಸೆಕ್ ಇದೆ. ಕಬಿನಿ ಒಟ್ಟು ಸಾಮರ್ಥ್ಯ 19.52 ಟಿಎಂಸಿ, ಇಂದಿನ ಮಟ್ಟ 17.98 ಟಿಎಂಸಿ ಇದೆ. ಒಳಹರಿವು 5,039 ಕ್ಯೂಸೆಕ್ ಹಾಗೂ ಹೊರಹರಿವು 3250 ಕ್ಯೂಸೆಕ್ ಇದೆ. ಇದನ್ನೂ ಓದಿ: ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ – ಹೆಚ್.ವಿಶ್ವನಾಥ್ ಬೇಸರ
ಹೇಮಾವತಿ ಒಟ್ಟು ಸಾಮರ್ಥ್ಯ 37.10 ಟಿಎಂಸಿ, ಇಂದಿನ ಮಟ್ಟ 17.60 ಟಿಎಂಸಿ ಇದೆ. ಒಳಹರಿವು 7,796 ಕ್ಯೂಸೆಕ್ ಹಾಗೂ ಒಳಹರಿವು 250 ಕ್ಯೂಸೆಕ್ ಇದೆ. ಹಾರಂಗಿ ಒಟ್ಟು ಸಾಮರ್ಥ್ಯ 8.50 ಟಿಎಂಸಿ, ಇಂದಿನ ಮಟ್ಟ 5.46 ಟಿಎಂಸಿ ಇದೆ. ಒಳಹರಿವು 2,472 ಕ್ಯೂಸೆಕ್ ಹಾಗೂ ಒಳಹರಿವು 200 ಕ್ಯೂಸೆಕ್ ಇದೆ. ತುಂಗಭದ್ರಾ ಒಟ್ಟು ಸಾಮರ್ಥ್ಯ 105.79 ಟಿಎಂಸಿ, ಇಂದಿನ ಮಟ್ಟ 18.24 ಟಿಎಂಸಿ ಇದೆ. ಒಳಹರಿವು 50,715 ಕ್ಯೂಸೆಕ್ ಹಾಗೂ ಹೊರಹರಿವು 391 ಕ್ಯೂಸೆಕ್ ಇದೆ.
ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 151.75 ಟಿಎಂಸಿ, ಇಂದಿನ ಮಟ್ಟ 35.41 ಟಿಎಂಸಿ ಇದೆ. ಒಳಹರಿವು 29,044 ಕ್ಯೂಸೆಕ್ ಹಾಗೂ ಹೊರಹರಿವು 1570 ಕ್ಯೂಸೆಕ್ ಇದೆ. ಸೂಪಾ ಜಲಾಶಯದ ಒಟ್ಟು ಸಾಮರ್ಥ್ಯ 145.33 ಟಿಎಂಸಿ, ಇಂದಿನ ಮಟ್ಟ 42.81 ಟಿಎಂಸಿ ಇದೆ. ಒಳಹರಿವು 28,597 ಕ್ಯೂಸೆಕ್ ಹಾಗೂ ಹೊರಹರಿವು 500 ಕ್ಯೂಸೆಕ್ ಇದೆ. ಆಲಮಟ್ಟಿ ಡ್ಯಾಂನ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇಂದಿನ ಮಟ್ಟ 59.39 ಟಿಎಂಸಿ ಇದೆ. ಒಳಹರಿವು 59,306 ಕ್ಯೂಸೆಕ್ ಹಾಗೂ ಹೊರಹರಿವು 430 ಕ್ಯೂಸೆಕ್ ಇದೆ. ಇದನ್ನೂ ಓದಿ: ಮುಡಾ ಪ್ರಕರಣ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ