ಚಿಕ್ಕಮಗಳೂರು: ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ದೊಡ್ಡ, ದೊಡ್ಡ ಮರಗಳಿವೆ. ಗಾಳಿ-ಮಳೆ ಹೆಚ್ಚಿದೆ. ಗಾಳಿಗೆ ಮರಗಳು ಬೀಳಬಹುದೆಂದು ಪಕ್ಕದ ಮನೆಯಲ್ಲಿ ಮಲಗಿದ್ದ ಮಹಿಳೆ ಮೇಲೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ.
Advertisement
ಮೃತರನ್ನು ಚಂದ್ರಮ್ಮ ಹಾಗೂ ಸರಿತಾ ಎಂದು ಗುರುತಿಸಲಾಗಿದೆ. ಮೃತ ಸರಿತಾ, ಚಂದ್ರಮ್ಮನವರ ಸಂಬಂಧಿಯಾಗಿದ್ದಾರೆ. ಮಕ್ಕಳಿದ್ದಾರೆ, ಭಾರಿ ಗಾಳಿಯು ಬೀಸುತ್ತಿದೆ. ಮರ ಮುರಿದು ಮನೆ ಮೇಲೆ ಬಿದ್ದರೆ ನನಗೆ ಹಾಗೂ ಮಕ್ಕಳಿಗೂ ತೊಂದರೆ ಆಗಬಹುದು ಎಂದು ಸರಿತಾ ಮಕ್ಕಳಿಬ್ಬರೊಂದಿಗೆ ಸುನಿಲ್ ಹಾಗೂ ದೀಕ್ಷಿತ್ ಜೊತೆ ಚಂದ್ರಮ್ಮನ ಮನೆಯಲ್ಲಿ ಮಲಗಿದ್ದರು. ಚಂದ್ರಮ್ಮನ ಮನೆಯ ಪಕ್ಕದಲ್ಲಿದ್ದ ಬೃಹತ್ ಮರ ಕಳೆದ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಮುರಿದು ಮನೆ ಮೇಲೆ ಬಿದ್ದಿದೆ. ಮರ ಬಿದ್ದ ಕೂಡಲೇ ಚಂದ್ರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ
Advertisement
Advertisement
ತೀವ್ರ ಅಸ್ವಸ್ಥರಾಗಿದ್ದ ಸರೀತಾರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಸರಿತಾ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಸರಿತಾ ಅವರ ಇಬ್ಬರು ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ಸಾವಿನಿಂದ ಪಾರಾಗಿದ್ದಾರೆ. ಕಾಫಿ ನಾಡಿನ ಮಲೆನಾಡು ಭಾಗದಲ್ಲಿ ಮಳೆ ಹಾಗೂ ಗಾಳಿಯ ಅಬ್ಬರ ಮುಂದುವರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ಗಾಳಿ ಮಳೆಗೆ ಮೂವರು ಸಾವನ್ನಪ್ಪಿದ್ದಾರೆ. ಚಂದ್ರಮ್ಮ ಹಾಗೂ ಸರಿತಾ ಅವರು ಸೇರಿ ಜಿಲ್ಲೆಯಲ್ಲಿ ಈ ವರ್ಷದ ಮಳೆರಾಯನ ಅಬ್ಬರಕ್ಕೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಸೀದಿ, ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನ ಆರಂಭ!