– ವಿದ್ಯುತ್ ಸಂಪರ್ಕ ಕಡಿತ; ಜನರ ಪರದಾಟ
ಬೆಂಗಳೂರು: ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗುತ್ತಿದೆ. ಒಂದೆಡೆ ಮಳೆಯ ಆಗಮನದಿಂದ ರೈತರು ಖುಷಿಪಟ್ಟರೆ, ಇನ್ನೂ ಕೆಲವೆಡೆ ಮಳೆಯ ಅವಾಂತರಕ್ಕೆ ಜನರು ಕಂಗಾಲಾಗಿದ್ದಾರೆ.
Advertisement
ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಳೆಯ ಹೊಡೆತಕ್ಕೆ (Rain Effect) ಮರಗಳು ಧರೆಗುರುಳುತ್ತಿದ್ದು, ಕಳೆದ ಐದು ದಿನಗಳಲ್ಲಿ 271 ಮರಗಳು ನೆಲಕಚ್ಚಿವೆ. ಹಲವೆಡೆ ನಿಂತಿದ್ದ ಕಾರುಗಳ ಮೇಲೆ ಮರ ಮುರಿದುಬಿದ್ದು ಹಾನಿಯಾಗಿದೆ. ಈ ಬಗ್ಗೆ ಬಿಬಿಎಂಪಿಗೆ (BBMP) 400ಕ್ಕೂ ಹೆಚ್ಚು ದೂರುಗಳು ಬಂದಿವೆ.
Advertisement
Advertisement
ಹುಬ್ಬಳ್ಳಿಯಲ್ಲಿ (Hubballi) ಶನಿವಾರ ರಾತ್ರಿ ಸುರಿದ ಅಪಾರ ಮಳೆಗೆ ಕಿಮ್ಸ್ ಹಿಂಭಾಗದ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಕಾಂಪೌಂಡ್ ಕುಸಿತವಾಗಿದೆ. ಪರಿಣಾಮವಾಗಿ ಕಾಂಪ್ಲೆಕ್ಸ್‍ನ ಬೇಸ್‍ಮೆಂಟ್‍ನಲ್ಲಿದ್ದ 40 ಬೈಕ್‍ಗಳಿಗೆ ಹಾನಿಯಾಗಿದೆ. ಇನ್ನೂ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಹೊರ ಭಾಗದಲ್ಲಿನ ಎರಡು ಎಕರೆ ಪ್ರದೇಶದಲ್ಲಿ ಬೆಳಿದಿದ್ದ ತೋಟದಲ್ಲಿ ಬುಡ ಸಮೇತ ನಿಂಬೆ ಗಿಡಗಳು ನೆಲಕ್ಕುರುಳಿವೆ. ಇನ್ನೊಂದೆಡೆ ಸಿಡಿಲು ಬಡಿದು ಒಂದು ಆಕಳು, ಎರಡು ಆಡಿನ ಮರಿಗಳು ಸಾವನ್ನಪ್ಪಿವೆ.
Advertisement
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಇಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ. ಚಾಮರಾಜನಗರದಲ್ಲಿ ಭಾರೀ ಮಳೆಗೆ ಲಕ್ಷಾಂತರ ಬೆಲೆ ಬಾಳುವ ಬೆಳ್ಳುಳ್ಳಿ ಬೆಳೆ ನೀರಿನಲ್ಲಿ ಕೊಚ್ಚಿಹೋಗಿವೆ. ಮಲೆನಾಡು ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು (Chikkamagaluru) ತಾಲೂಕಿನ ಶಿರವಾಸೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಜನರು ಪರದಾಡುವಂತಾಗಿದೆ.
ರಾಯಚೂರಿನಲ್ಲಿ ಹೋಟೆಲ್ ಒಂದರ ಟಿನ್‍ಗಳು ಹಾರಿ ಹೋಗಿ ಸಂಪೂರ್ಣ ಹಾನಿಯಾಗಿದೆ. ಇದೇ ಗ್ರಾಮದಲ್ಲಿ ಸಿಡಿಲು ಬಡಿದು ಐದು ಮೇಕೆಗಳು ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ.