ಬೆಂಗಳೂರು: ಮಳೆಯ ಭಯದ ನಡುವೆ ಸಿಲಿಕಾನ್ ಸಿಟಿಯ ಮಂದಿಗೆ ಮತ್ತೊಂದು ಭಯ ಶುರುವಾಗಿದ್ದು, ನಗರದ ಬಹುತೇಕ ಭಾಗಗಳಲ್ಲಿ ಹಾವುಗಳ ಕಾಟ ಶುರುವಾಗಿದೆ.
ಬೆಂಗಳೂರಿನಲ್ಲಿ ಮಳೆ ಹೆಚ್ಚಾದ ಕಾರಣ ಅಡುಗೆ ಮನೆ, ಸಂಪ್, ಶೂ, ಡ್ರಮ್, ಗ್ಯಾಸ್ ಸಿಲಿಂಡರ್ ನಲ್ಲಿ ಹಾವುಗಳು ಪತ್ತೆಯಾಗುತ್ತಿದೆ. ಹಾವುಗಳ ಕಾಟಕ್ಕೆ ಗೃಹಿಣಿಯರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಬಿಬಿಎಂಪಿ ವನ್ಯಜೀವಿ ಸಂರಕ್ಷಕರಿಗೆ ದಿನ ಪೂರ್ತಿ ಹಾವು ರಕ್ಷಣೆ ಮಾಡುವ ಕೆಲಸವಾಗಿದೆ.
Advertisement
ಮಳೆ ಹೊಡೆತಕ್ಕೆ ಹಾವುಗಳು ಹೊರ ಬಂದು ಮನೆಗಳ ಆಶ್ರಯವನ್ನ ಹುಡುಕುತ್ತಿವೆ. ಹೀಗಾಗಿ ಹೆಚ್ಚೆಚ್ಚು ಹಾವುಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಅಡುಗೆ ಮನೆ, ಸಂಪ್, ಕಿಟಕಿ, ಶೂ ಒಳಗೆ, ಹಳೇ ಸಾಮಾಗ್ರಿ ತುಂಬಿರುವ ಕೊಠಡಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಬೆಳಗ್ಗೆ ಆರಾಮಾಗಿ ಓಡಾಡುವಂತಿಲ್ಲ ಎಂದು ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕ ಮೋಹನ್ ಹೇಳಿದ್ದಾರೆ.
Advertisement
Advertisement
ಕಳೆದೆರಡು ದಿನದಿಂದ ಬಿಬಿಎಂಪಿ ವನ್ಯಜೀವಿ ಸಂರಕ್ಷಕರಿಗೆ ಹಾವು ರಕ್ಷಣೆ ಮಾಡುವುದೆ ಕೆಲಸವಾಗಿದೆ. ಒಬ್ಬ ಸ್ವಯಂ ಸೇವಕನಿಗೆ ಏನಿಲ್ಲವೆಂದರೂ 10 ರಿಂದ 15 ಹಾವಿನ ರಕ್ಷಣೆ ಕರೆ ಬರುತ್ತಿದೆ. ಹೆಚ್ಚಾಗಿ ವೈಟ್ ಫೀಲ್ಡ್, ಮಾರತ್ತಹಳ್ಳಿ, ಮುನ್ನೇನಕೊಳಲು, ಮಹದೇವಪುರ, ಕೆಆರ್ ಪುರ, ಕೊತ್ತನೂರು ಮತ್ತು ಪೀಣ್ಯ ಪ್ರದೇಶಗಳಲ್ಲಿ ಹಾವಿನ ರಕ್ಷಣೆ ಹೆಚ್ಚಿದೆ ಎಂದು ಸ್ವಯಂ ಸೇವಕ ರಾಜೇಶ್ ಅವರು ತಿಳಿಸಿದ್ದಾರೆ.
Advertisement
ಮಧ್ಯಾಹ್ನದ ವೇಳೆ ಉರಿ ಬಿಸಿಲು ಹಾಗಾಗಿ ಸ್ವಲ್ಪ ತಣ್ಣನೆಯ ಜಾಗ ಹುಡುಕುತ್ತವೆ. ರಾತ್ರಿ ಮಳೆಯಾದಾಗ ಬೆಚ್ಚಗಿನ ಪ್ರದೇಶವನ್ಮ ಹುಡುಕಿ ಮನೆ ಬಳಿ ಬರುತ್ತಿವೆ. ಹಾಗಾಗಿ ಸ್ವಲ್ಪ ಎಚ್ಚರಿಕೆ ಇಂದ ಇರಬೇಕಾದ ಪರಿಸ್ಥಿತಿ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv