ಬೆಂಗಳೂರು: ನಗರದಲ್ಲಿ ಮಳೆಯಿಂದ ಮೆಟ್ರೋ ಹಳಿಯ (Metro Train Track) ಮೇಲೆ ಮರ ವಾಲಿದ ಪರಿಣಾಮ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Metro Purple line) ಸುಮಾರು 15 ನಿಮಿಷ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿತು.
ಬೆಂಗಳೂರಿನಲ್ಲಿಂದು (Bengaluru) ವರುಣನ ಆರ್ಭಟ ಜೋರಾಗಿದೆ. ಮಧ್ಯಾಹ್ನ ಸುರಿದ ಭಾರೀ ಮಳೆಗೆ ಹಲವೆಡೆ ರಸ್ತೆಗಳು ಕೆರೆಯಾದಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಈ ಮಧ್ಯೆ ಮಳೆಯಿಂದ ಮೆಟ್ರೋ ಹಳಿ ಮೇಲೆ ಮರವೊಂದು ವಾಲಿದೆ. ಹೀಗಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಜೆ 4:50ರ ವೇಳೆ ಸುಮಾರು 15 ನಿಮಿಷಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಹಾತ್ಮ ಗಾಂಧಿ ರಸ್ತೆ (ಎಂ.ಜಿ ರಸ್ತೆ) ಮೆಟ್ರೋ ನಿಲ್ದಾಣದ ಸಮೀಪ ಘಟನೆ ನಡೆದಿತ್ತು.
ಸುಮಾರು 15 ನಿಮಿಷಗಳ ನಂತರ ಮೆಟ್ರೋ ಸಿಬ್ಬಂದಿ ಮರದ ಕೊಂಬೆಯನ್ನ ತೆರವು ಮಾಡಿ ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದನ್ನೂ ಓದಿ: ವೈದ್ಯೆ ಜೊತೆ ಅನುಚಿತ ವರ್ತನೆ – ವಿವಾದಿತ ಆಪ್ ಶಾಸಕಿ ರಾಖಿ ಬಿರ್ಲಾ ತಂದೆ ವಿರುದ್ಧ ಎಫ್‍ಐಆರ್
ಮೆಟ್ರೋ ಸಂಚಾರ ಪುನರಾರಂಭ:
ಮರ ತೆರವುಗೊಳಿಸಿದ ನಂತರ ಮೆಟ್ರೋ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
3 ತಿಂಗಳಲ್ಲಿ 2ನೇ ಅವಾಂತರ:
ಕಳೆದ ಜೂನ್ 2ರಂದು ಇದೇ ರೀತಿ ಘಟನೆಯೊಂದು ನೇರಳೆ ಮಾರ್ಗದಲ್ಲಿ ಸಂಭವಿಸಿತ್ತು. ಟ್ರಿನಿಟಿ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ (MG Road) ಕಡೆಗೆ ಹೊರಡುವ ಮಾರ್ಗದಲ್ಲಿ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದ್ದ ಕಾರಣ ಮೆಟ್ರೋ ರೈಲು (Metro Train) ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದನ್ನೂ ಓದಿ: ಮಾರ್ಷಲ್ಸ್ ಆರ್ಟ್ಸ್ ಬ್ಲಾಕ್ ಬೆಲ್ಟ್ ಪ್ರವೀಣ ರಾಹುಲ್ ಗಾಂಧಿ – ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ವೀಡಿಯೋ!