-ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತ
ಬೆಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ನಗರದ ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿ ನಿದ್ದೆ ಇಲ್ಲದೆ ಪರದಾಡುವಂತಾಗಿದೆ.
Advertisement
ರಾತ್ರಿ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ನಗರದ ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತವಾಗಿದ್ದವು. ಮೆಜೆಸ್ಟಿಕ್ ರೈಲ್ವೇ ಅಂಡರ್‌ಪಾಸ್, ವಿಂಡ್ಸನ್ ಬ್ರಿಡ್ಜ್, ಸೆವೆನ್ ಮಿಸಿಸ್ಟರ್ ಕ್ವಾಟ್ರಸ್ ರಸ್ತೆ ಜಲಾವೃತಗೊಂಡಿತ್ತು. ಮಂತ್ರಿಮಾಲ್ ಬಳಿ ರಸ್ತೆ ಕೆರೆಯಂತಾಗಿತ್ತು. ಪರಿಣಾಮ ಐಶಾರಾಮಿ ಬಿಎಂಡಬ್ಲ್ಯೂ ಕಾರು, ಆಟೋಗಳು ನೀರಲ್ಲಿ ಸಿಲುಕಿ ಕೆಟ್ಟು ನಿಲ್ಲುವಂತಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ – ಕಾರಿನಲ್ಲಿದ್ದ ಇಬ್ಬರು ಗ್ರೇಟ್ ಎಸ್ಕೇಪ್
Advertisement
Advertisement
ರಾತ್ರಿ ವೇಳೆ ನೀರಲ್ಲಿ ಕಟ್ಟು ನಿಂತಿದ್ದ ಈ ವಾಹನಗಳನ್ನು ಟೋಯಿಂಗ್ ಮಾಡಲಾಯ್ತು. ಕೆ.ಆರ್ ಪುರಂನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ರಾತ್ರಿ ಇಡೀ ಜನ ನಿದ್ದೆ ಇಲ್ಲದೆ ಮನೆಯ ಒಳಭಾಗದಲ್ಲಿದ್ದ ನೀರನ್ನು ಹೊರ ಹಾಕುವುದರಲ್ಲಿ ಕಾಲ ಕಳೆಯವಂತಾಯಿತು. ಇದನ್ನೂ ಓದಿ: ಫ್ರೀಯಾಗಿ ಕೋಳಿ ಕೊಡಲಿಲ್ಲ- ಹಿಗ್ಗಾಮುಗ್ಗ ಥಳಿಸಿದ್ರು
Advertisement