ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೆರೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಕುಂದಾಪುರ ತಾಲೂಕಿನ ಗ್ರಾಮದ ಜನ ನೆರೆ ನೀರಲ್ಲಿ ನದಿ ದಾಟಿಕೊಂಡು ಬಂದಿದ್ದಾರೆ.
Advertisement
ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿರುವ ಕಡಲ್ಕೊರೆತವನ್ನು ವೀಕ್ಷಣೆ ಮಾಡಿದ ಸಚಿವರು ಬಳಿಕ ಕುಂದಾಪುರ ತಾಲೂಕಿಗೆ ಭೇಟಿ ಕೊಟ್ಟರು. ಈ ವೇಳೆ ಸಚಿವರನ್ನು ಭೇಟಿ ಮಾಡಲು ಕೋಟ ವ್ಯಾಪ್ತಿಯ ಮೂಡು ಗಿಳಿಯಾರಿನ ಗ್ರಾಮಸ್ಥರು ನದಿ ನೀರಿನಲ್ಲಿ ಮುಳುಗಿ ಈಜಿಕೊಂಡೇ ಬಂದಿದ್ದಾರೆ. ಇದನ್ನೂ ಓದಿ: ಗೋವಾದಲ್ಲೂ ಆಪರೇಷನ್ ಕಮಲ ಸದ್ದು – ಇಬ್ಬರು ಕಾಂಗ್ರೆಸ್ ಶಾಸಕರ ಅನರ್ಹತೆ ಕೋರಿ ಸ್ಪೀಕರ್‌ಗೆ ಮನವಿ
Advertisement
Advertisement
ಶೋಭಾ ಕರಂದ್ಲಾಜೆ ಅವರನ್ನು ಮಾತನಾಡಿಸಲು ನೆರೆ ನೀರಿನಲ್ಲಿ ಬಂದ ಗ್ರಾಮಸ್ಥರು, ನಿಮ್ಮಿಂದ ಸಮಸ್ಯೆಗೆ ಪರಿಹಾರ ಇನ್ನಾದರೂ ಸಿಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಬಂದಿದ್ದೇವೆ ಎಂದರು. ಈ ವೇಳೆ ಸಚಿವರು ಕಮ್ಮಟ್ಟು ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಿದರು. ಸಂಪರ್ಕ ರಸ್ತೆಗಳ ಬಗ್ಗೆ ವಿಚಾರಣೆ ನಡೆಸಿದರು. ಉಡುಪಿ ಡಿಸಿ ಕೂರ್ಮ ರಾವ್, ಸಚಿವರ ಮುಂದೆ ಸಮಸ್ಯೆಗಳನ್ನು ಹೇಳಿಕೊಂಡರು. ರಾಜ್ಯ ಸರ್ಕಾರ ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ. ಸ್ಥಳೀಯ ಪಂಚಾಯತ್ ಇತ್ತ ಕಡೆ ಮುಖ ಮಾಡಿಲ್ಲ. ಹಾಗಾಗಿ ನಿಮ್ಮಿಂದ ಸಮಸ್ಯೆಗೆ ಪರಿಹಾರ ಏನಾದರೂ ಸಿಗಬಹುದೇ ಎಂದು ಕೇಳಿಕೊಂಡರು. ಒಂದು ವಾರಗಳ ಕಾಲ ಸುರಿದ ಮಳೆಯಿಂದಾಗಿ ಬಹುತೇಕ ಕಮ್ಮಟ್ಟು ಪರಿಸರ ದ್ವೀಪವಾಗಿತ್ತು. ಇದನ್ನೂ ಓದಿ: ಕಾಪು ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಶೋಭಾ ಕರಂದ್ಲಾಜೆ ಭೇಟಿ- ಪರಿಹಾರದ ಭರವಸೆ