ಅಹಮದಾಬಾದ್: ಗುಜರಾತ್‌ನಲ್ಲಿ (Gujarat) ಭಾರೀ ಮಳೆಯಿಂದಾಗಿ ಪ್ರವಾಹ (Flood) ಉಂಟಾಗಿದ್ದು, ಸುಮಾರು 15 ಜನ ಸಾವನ್ನಪ್ಪಿದ್ದಾರೆ. 23 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸೋಮವಾರದಿಂದ ಗುಜರಾತ್ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಸುಮಾರು 15 ಜನ ಮೃತಪಟ್ಟಿದ್ದಾರೆ. 23,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ 300ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ಕಾರು ಓಡಿಸೋ ಪೈಪೋಟಿಗಿಳಿದ ಸಾಹಸಗಳ ಬಗ್ಗೆ ವಿವರಿಸಿದ ಕಂಗನಾ
ಗುಜರಾತ್ ಸರ್ಕಾರದ ಮಾಹಿತಿ ಪ್ರಕಾರ ಆನಂದ್ ಜಿಲ್ಲೆಯಲ್ಲಿ 6 ಜನ, ಗಾಂಧೀನಗರ ಮತ್ತು ಮಾಹಿಸಾಗರ್ ಜಿಲ್ಲೆಯಲ್ಲಿ 2 ಮತ್ತು ಮೋರ್ಬಿ, ವಡೋದರಾ, ಖೇಡಾ, ಭರುಚ್ ಮತ್ತು ಅಹಮದಾಬಾದ್ (Ahmedabad) ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದೆ ಎಂದು ತಿಳಿಸಿದೆ. ವಡೋದರಾ ಜಿಲ್ಲೆಯಿಂದ 45 ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಯಿಂದ 30 ಗರ್ಭೀಣಿಯರಿಗೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ ದ್ವಾರಕಾ, ಆನಂದ್, ವಡೋದರಾ, ಖೇಡಾ, ಮೋರ್ಬಿ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಪ್ರವಾಹ ಹೆಚ್ಚಾಗುವ ಲಕ್ಷಣಗಳಿದ್ದು ಜನರನ್ನು ರಕ್ಷಣೆ ಮಾಡಲು ಗುಜರಾತ್ ಸರ್ಕಾರ 6 ಭಾರತೀಯ ಸೇನಾ ತುಕಡಿಗಳನ್ನು ಕೋರಿದೆ. ಸದ್ಯಕ್ಕೆ 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು 22 ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉನ್ನತ ಮಟ್ಟದ ಸಭೆ ನಡೆಸಿ ಪ್ರವಾಹ ಮತ್ತು ಜನರ ರಕ್ಷಣೆ ಬಗ್ಗೆ ಚರ್ಚಿಸಿದ್ದಾರೆ. ಭಾರತೀಯ ಸೇನೆ, ವಾಯುಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಧಿಖಾರಿಗಳಿಂದ ಮಾಹಿತಿ ಪಡೆದಿದ್ದಾರೆ.ಇದನ್ನೂ ಓದಿ: ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ: ಛಲವಾದಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ (CM Bhupendrabhai Patel) ಅವರಿಗೆ ಕರೆ ಮಾಡಿ ಪ್ರವಾಹ ಮತ್ತು ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ನರೇಂದ್ರ ಮೋದಿಯವರು ಕರೆ ಮಾಡಿ ಮಳೆ ಪ್ರವಾಹ ಮತ್ತು ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜನರ ರಕ್ಷಣೆಯ ಬಗ್ಗೆ ಕೆಲವೊಂದು ಸಲಹೆ ನೀಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಿಂದ ರಕ್ಷಣೆಗೆ ಬೇಕಾಗುವ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಪ್ರಧಾನಿಯವರು ಗುಜರಾತ್ ಜನತೆಯನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಗುಜರಾತ್ ಜನರು ಪ್ರಕೃತಿ ವಿಕೋಪ ಅಥವಾ ಯಾವುದೆ ತೊಂದರೆಗೆ ಒಳಗಾದಾಗ ಅವರು ಯಾವಾಲೂ ಬೆಂಬಲ ನೀಡುತ್ತಾರೆ ಎಂದು ಸಿಎಂ ಭೂಪೇಂದ್ರ ಪಟೇಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗುಜರಾತ್‌ನ ಕೆಲವೊಂದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮೀನುಗಾರರಿಗೆ ಕೆರೆ ಮತ್ತು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.ಇದನ್ನೂ ಓದಿ: ಘಟಪ್ರಭಾ ನದಿ ಪ್ರವಾಹ ಪರಿಹಾರ ಕುರಿತು ಶೀಘ್ರ ಕ್ರಮ: ಸಿಎಂ ಸಿದ್ದರಾಮಯ್ಯ