ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಶನಿವಾರ ಹಾಗೂ ಭಾನುವಾರ ಸುರಿದ ಮಳೆಗೆ (Rain) ದೊಡ್ಡ ಅವಾಂತರಗಳು ಸೃಷ್ಟಿ ಆಗಿದೆ. ನೀರು ನುಗ್ಗಿ ಮನೆಗಳು ಕುಸಿದಿದ್ದವು. ಈಗ ಬಿಬಿಎಂಪಿ (BBMP) ಮಳೆಯಿಂದ ಆದ ಹಾನಿಗೆ ಪರಿಹಾರ (Relief) ಕೊಡಲು ಮುಂದಾಗಿದೆ.
ಬೆಂಗಳೂರಿನಲ್ಲಿ ಒಂದು ಗಂಟೆ, ಎರಡು ಗಂಟೆ ಮಳೆ ಬಂತು ಎಂದರೆ ಬೆಂಗಳೂರಿಗರು ನರಕ ಅನುಭವಿಸುತ್ತಾರೆ. ಶನಿವಾರ ಬೆಂಗಳೂರಿನಲ್ಲಿ 115 ಮಿ.ಮೀ ಮಳೆ ಆಗಿತ್ತು. ಬೆಂಗಳೂರಿನ 43ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಜೋರು ಮಳೆ ಆಗಿತ್ತು. ಗಾಂಧಿ ನಗರ ವಿಧಾನಸಭಾ ಕ್ಷೇತ್ರ, ಯಲಹಂಕ ಸೇರಿದಂತೆ ಹಲವು ಕಡೆ ಮಳೆಯಾಗಿ 60ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಈಗ ಪಾಲಿಕೆ ಮಳೆಯಿಂದ ಆದ ಹಾನಿಗೆ ಪರಿಹಾರ ನೀಡಲು ನಿರ್ಧರಿಸಿದೆ. 60 ಮನೆಗಳನ್ನು ಗುರುತು ಮಾಡಿದ್ದು, ಪ್ರತಿ ಮನೆಗೆ 10 ರಿಂದ 15 ಸಾವಿರ ಪರಿಹಾರ ನೀಡಲು ಮುಂದಾಗಿದೆ. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳು ನಾಡಿದ ದೈವ ನರ್ತನ – ಕಾನೂನು ಸಮರಕ್ಕೆ ಮುಂದಾಗಿರುವ ಕೊಡಗು ದೈವ ನರ್ತಕರ ಸಂಘ
ಇನ್ನೂ ಬಿಬಿಎಂಪಿ ಪಶ್ಚಿಮ ವಲಯ, ಯಲಹಂಕ ವಲಯದಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಮನೆಗೆ ನೀರು ನುಗ್ಗಿ 48 ಗಂಟೆಗಳ ಕಾಲ ಜನ ಸಮಸ್ಯೆಗೆ ಒಳಗಾಗುತ್ತಿದ್ದರೆ ಪರಿಹಾರಕ್ಕೆ ಅರ್ಹರು ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಮುಳುಗಡೆ ಸಂಬಂಧ ನೀರು ಹಾದು ಹೋಗಲು ಹೊಸ ಕಾಲುವೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್