ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು ಶ್ರೀರಂಗಪಟ್ಟಣದ (Srirangapatna) ಕೆಆರ್‌ಎಸ್ ಡ್ಯಾಂ (KRS DAM) ಒಳಹರಿವಿನ ಪ್ರಮಾಣ ಇಳಿಕೆಯಾಗಿದೆ.
ಕಳೆದ ವಾರ 15,000 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ 2,459 ಕ್ಯೂಸೆಕ್‍ಗೆ ಇಳಿದಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಡ್ಯಾಂ ಒಳಹರಿವಿನಲ್ಲೂ ಕುಸಿತ ಕಂಡಿದೆ. ಕಳೆದ 8 ದಿನಗಳಿಂದ ಡ್ಯಾಂಗೆ 5 ಟಿಎಂಸಿ ನೀರು ಮಾತ್ರ ಹರಿದು ಬಂದಿದೆ. ಕಳೆದ ವಾರ 10 ಟಿಎಂಸಿ ನೀರಿತ್ತು. ಶುಕ್ರವಾರ (ಇಂದು) ಡ್ಯಾಮ್‍ನಲ್ಲಿ ಶೇಖರಣೆಗೊಂಡಿರುವ ನೀರಿನ ಮಟ್ಟ 15.224 ಟಿಎಂಸಿ ಆಗಿದೆ. ಇದರಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದಂತಾಗಿದೆ. ಇದನ್ನೂ ಓದಿ: ನಿಮ್ಮ ರೂಮ್‍ನಲ್ಲಿ ಡ್ರಗ್ಸ್ ಇದೆ – ಪೊಲೀಸರಂತೆ ನುಗ್ಗಿ ಯುವಕರ ರೂಮ್ ದರೋಡೆ!
Advertisement
Advertisement
3 ತಿಂಗಳಿಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕೃಷಿಗೆ ನೀರು ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಲ್ಲಿ ಆತಂಕ ಶುರುವಾಗಿದೆ. ನೀರಿಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದನ್ನೂ ಓದಿ: ವಿಧಾನಸೌಧದಲ್ಲಿ ನಕಲಿ ಪಾಸ್ ಹಾವಳಿ – 4 ದಿನದಲ್ಲಿ 300ಕ್ಕೂ ಹೆಚ್ಚು ನಕಲಿ ಪಾಸ್
Advertisement
ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
Advertisement
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 88.78 ಅಡಿ
ಗರಿಷ್ಠ ಸಂಗ್ರಹ ಸಾಮಥ್ರ್ಯ – 49.452 ಟಿಎಂಸಿ
ಇಂದು ಡ್ಯಾಂನಲ್ಲಿರುವ ನೀರು – 15.224 ಟಿಎಂಸಿ
ಒಳಹರಿವು – 2459 ಕ್ಯೂಸೆಕ್
ಹೊರಹರಿವು – 393 ಕ್ಯೂಸೆಕ್
Web Stories