ಬೆಂಗಳೂರು: ಗುರುವಾರ ಸಂಜೆ ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಛಲವಾದಿಪಾಳ್ಯದಲ್ಲಿ ಅವಾಂತಹ ಸೃಷ್ಟಿಯಾಗಿದೆ.
ನಗರದಲ್ಲಿ ಮಳೆಯಿಂದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಈ ಮಳೆ ನೀರಿನ ಜೊತೆ ಚರಂಡಿ ನೀರು ನುಗ್ಗಿದ್ದು, ರಾತ್ರಿಯೆಲ್ಲ ಸಾವಿರಾರು ಮಂದಿ ನಿದ್ದೆಗೆಟ್ಟಿದ್ದಾರೆ. ಅಷ್ಟೇ ಅಲ್ಲದೇ ಮಳೆಗೆ ಕೆಲವು ಕಡೆ ಮರಗಳು ಕೂಡ ನೆಲಕ್ಕುರುಳಿವೆ. ಮಳೆಗೆ ಮನೆ ಮುಂದೆ ಕೆರೆಯಂತೆ ನೀರು ನಿಂತಿದ್ದು, ಜನರು ಮನೆ ಒಳಗಡೆ ಇರುವ ನೀರನ್ನು ಸ್ವಚ್ಛ ಮಾಡಿದ್ದಾರೆ.
Advertisement
Advertisement
ಛಲವಾದಿ ಪಾಳ್ಯದ ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇತ್ತ ಚರಂಡಿ ನೀರಿಗೆ ಛಲವಾದಿ ಪಾಳ್ಯ ಗಬ್ಬೆದ್ದು ನಾರುತ್ತಿದೆ. ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯಕೈಗೊಂಡ ಪರಿಣಾಮ ಇಷ್ಟೆಲ್ಲಾ ಅವಾಂತರ ಸಂಭವಿಸಿದೆ ಎನ್ನಲಾಗಿದೆ.
Advertisement
ಇದೇ ಏರಿಯಾದಲ್ಲಿ ಗೂಡ್ ಶೆಡ್ ರಸ್ತೆಯಲ್ಲಿ ಕೆಲವು ದಿನಗಳಿಂದ ರಾಜಕಾಲುವೆ ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದೆ. ನಿನ್ನೆ ರಾತ್ರಿ ಕಾಮಗಾರಿ ವೇಳೆಯಲ್ಲೇ ಮಳೆ ಸುರಿದ ಪರಿಣಾಮ ಛಲವಾದಿ ಪಾಳ್ಯದ ತಗ್ಗು ಪ್ರದೇಶಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿರುವ ದವಸ, ಧಾನ್ಯ ಬಟ್ಟೆ-ಬರೆಗಳು ಹಾಳಾಗಿವೆ. ಸ್ಥಳೀಯ ಕಾರ್ಪೋರೇಟರಿಗೆ ಎಷ್ಟೇ ಬಾರಿ ತಮ್ಮ ಸಮಸ್ಯೆ ಕುರಿತು ಮಾಹಿತಿ ನೀಡಿದ್ರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯ ಗಂಗಾಧರ್ ಕಿಡಿಕಾರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv