ಯಾದಗಿರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಸತತ ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮಳೆಯಿಂದಾಗಿ ಹತ್ತಿಕುಣಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆ ನೀರಿನ ರಭಸಕ್ಕೆ ಯಡ್ಡಳ್ಳಿ ಗ್ರಾಮದ ಸೇತುವೆ ಕೊಚ್ಚಿಹೋಗಿದೆ. ಸೇತುವೆ ನಾಶ ಹಿನ್ನೆಲೆ ಯಡ್ಡಳ್ಳಿ ಗ್ರಾಮಕ್ಕೆ ತೆರಳಲು ಜನರು ಸಂಕಷ್ಟಪಡುವಂತಾಗಿದೆ. ಇದನ್ನೂ ಓದಿ:ಬೆಲೆ ಏರಿಕೆ, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ: ನಾರಾಯಣಸ್ವಾಮಿ
ಮತ್ತೊಂದು ಕಡೆ ಮಳೆರಾಯನ ಆರ್ಭಟಕ್ಕೆ ಭೀಮಾನದಿ ಉಕ್ಕಿ ಹರಿಯುತ್ತಿದ್ದು, ಗುರಣಸಗಿ ಬ್ರಿಡ್ಜ್ ಕಂ ಬ್ಯಾರೇಜ್‍ನಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆ ತೀರದಲ್ಲಿರುವ ವೀರಾಂಜನೇಯ ಮತ್ತು ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿವೆ. ಇದನ್ನೂ ಓದಿ:ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಎಫೆಕ್ಟ್ – ಹೊಸ ಸಂಶೋಧನೆ ವರದಿ ಆತಂಕ