ಬೀದರ್: ಮಹಾಮಳೆಗೆ ರಸ್ತೆಯೇ ಕೊಚ್ಚಿ ಹೋದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜಮಖಂಡಿ ಗ್ರಾಮದ ಬಳಿ ನಡೆದಿದೆ. ಭಾಲ್ಕಿ-ಹುಲಸೂರ್, ಹುಲಸೂರ್ – ಮಹಾರಾಷ್ಟ್ರದ ಲಾತೂರ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿನ್ನೆಯಿಂದ ಸುರಿದ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಜನರು ತತ್ತರಿಸಿ ಹೋಗಿದ್ದಾರೆ.
Advertisement
ಈ ಮಳೆಗೆ ಭಾಲ್ಕಿ ತಾಲೂಕಿನ ಗ್ರಾಮಗಳ ಹಲವು ರಸ್ತೆ, ಸೇತುವೆಗಳು ಕಡಿತಗೊಂಡಿದ್ದು ಉಚ್ಛಾ-ಬಸವಕಲ್ಯಾಣ, ಉಚ್ಛಾ-ಭಾಲ್ಕಿ ರಸ್ತೆ ಕಡಿತಗೊಂಡು ಸೇತುವೆ ಮೇಲೆ ನೀರು ಹರಿಯುತ್ತಿದೆ. ಜೊತೆಗೆ ಮಾವಿನಹಳ್ಳಿ-ಘೋಡವಾಡಿ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಈ ಮಹಾ ಮಳೆಗೆ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದ ಜನರು ಪರದಾಡುತ್ತಿದ್ದು, ಈ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ.ಇದನ್ನೂ ಓದಿ:ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸುವವರು ಅವಿವೇಕಿಗಳು: ಹುಲ್ಲೂರು ಕುಮಾರಸ್ವಾಮಿ
Advertisement
ಸರ್ಕಾರಿ ಶಾಲೆಗೆ ಹಾಗೂ ಗ್ರಾಮದ ಹಲವು ಮನೆಗಳಿಗೂ ನೀರು ನುಗ್ಗಿದೆ. ಗ್ರಾಮದ ಪಕ್ಕದಲ್ಲಿರುವ ಹಳ್ಳಿ ತುಂಬಿ ಗ್ರಾಮಕ್ಕೆ ನೀರು ನುಗ್ಗಿದ್ದು, ಧಾರಕಾರ ಮಳೆಗೆ ಗ್ರಾಮದ ಹನುಮಾನ ದೇವಸ್ಥಾನದ ಗೋಪುರ ಕುಸಿತವಾಗಿದೆ.ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ
Advertisement
ಮಹಾ ಮಳೆಗೆ ಭಾಲ್ಕಿ ತಾಲೂಕಿನ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ತಾಲೂಕಿನಲ್ಲಿ ಮಹಾ ಮಳೆಯಾಗುತ್ತಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.