ಬೆಂಗಳೂರು: ಇತ್ತೀಚೆಗೆ ಸಾರ್ವಜನಿಕರಿಗೆ ಟ್ರಾಫಿಕ್ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದನ್ನು ನೋಡಿದ್ದೀರಿ. ಆದರೆ ಇದೀಗ ಟ್ರಾಫಿಕ್ ಪೊಲೀಸರು ಜನರ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದ ವಿವಿಧೆಡೆ ಬುಧವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಕೆಲ ಕಡೆ ರಸ್ತೆಯ ಮೇಲೆ ನೀರು ನಿಂತು ಸವಾರರು ಪರದಾಡುವಂತಾಗಿತ್ತು. ಇತ್ತ ಬಿನ್ನಿಮಿಲ್ ರಸ್ತೆಯ ಮೇಲೆ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಂದರಿಂದಾಗಿ ಚಿಕ್ಕಪೇಟೆ ಠಾಣೆಯ ಮೂರು ಜನ ಟ್ರಾಫಿಕ್ ಪೊಲೀಸರು ಸಲಿಕೆ ಹಿಡಿದು, ಗುಂಡಿಗಳನ್ನು ಮುಚ್ಚಿ ರಸ್ತೆಯಲ್ಲಿ ನಿಂತಿದ್ದ ನೀರನ್ನು ಚರಂಡಿಗೆ ಹರಿಸಿದ್ದಾರೆ.
Advertisement
Advertisement
ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಸಾಕು ರಸ್ತೆ ತುಂಬಾ ನೀರು ನಿಂತು ವಾಹನ ಸವಾರರು ನರಕ ಅನುಭವಿಸುತ್ತಾರೆ. ಸಾಧಾರಣ ಮಳೆಯಾದರೂ ರಸ್ತೆಗಳು ಕೆರೆಗಳಂತಾಗುತ್ತವೆ. ಮಳೆಯಿಂದಾಗಿ ಬಿನ್ನಿಮಿಲ್ ರಸ್ತೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಟ್ರಾಫಿಕ್ ಪೊಲೀಸರ ಕಾರ್ಯದಿಂದ ಬಹುಬೇಗ ವಾಹನ ಸಂಚಾರ ಸುಗಮವಾಯಿತು.
Advertisement
ಚಿಕ್ಕಪೇಟೆ ಟ್ರಾಫಿಕ್ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಟಾಫ್ರಿಕ್ ಪೊಲೀಸರೊಬ್ಬರು ಗುದ್ದಲಿ ಹಿಡಿದು ಮಳೆ ನೀರನ್ನು ಪಕ್ಕದ ಮೋರಿಗೆ ಹರಿಸುತ್ತಿದ್ದ ವಿಡಿಯೋ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅನೇಕ ನೆಟ್ಟಿಗರು ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.