ಮಂಡ್ಯ: ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ವ್ಯಾಪ್ತಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಆರ್‌ಪೇಟೆ ಪಟ್ಟಣದಲ್ಲಿ ಹಲವು ಅವಘಡಗಳು ಸಂಭವಿಸಿವೆ. ಇದನ್ನೂ ಓದಿ: ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್
Advertisement
ಅಪಾರ ಪ್ರಮಾಣದಲ್ಲಿ ಸುರಿದ ಮಳೆಯಿಂದ ಕೆಆರ್‌ಪೇಟೆಯ ಎಂಡಿಸಿಸಿ ಬ್ಯಾಂಕ್‍ನ ಕಚೇರಿಗೆ ನೀರು ನುಗ್ಗಿದ ಪರಿಣಾಮ, ಕಚೇರಿಯಲ್ಲಿ ಇದ್ದ ಕಂಪ್ಯೂಟರ್, ದಾಖಲೆಗಳು ಹಾನಿಯಾಗಿವೆ. ಬೆಳಗ್ಗೆ ಕಚೇರಿಗೆ ಬಂದ ಸಿಬ್ಬಂದಿ ಬ್ಯಾಂಕ್ ಒಳ ಭಾಗದಲ್ಲಿ ನೀರಿನಲ್ಲಿ ನೆನದಿರುವ ವಸ್ತುಗಳನ್ನು ಹೊರಗಡೆ ತಂದು ಹಾರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಖಾದರವಾದ ಅಡುಗೆ ಇಷ್ಟ ಪಡುವವರಿಗಾಗಿ ಕ್ಯಾರೆಟ್ ಚಟ್ನಿ
Advertisement
Advertisement
ಗುರುವಾರ ರಾತ್ರಿಯೇ ಮಳೆ ನೀರು ನುಗ್ಗಿರುವ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಇದರಿಂದ ಬಸ್‍ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ನೀರಿನಲ್ಲಿ ಮುಳುಗಿದರು. ಕೊನೆ ಅಗ್ನಿ ಶಾಮಕದಳದ ಸಿಬ್ಬಂದಿ ನೀರಿನಲ್ಲಿ ಇದ್ದ ಪ್ರಯಾಣಿಕರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾದರು. ಇದಲ್ಲದೇ ಪಟ್ಟಣದ ಕೆಲ ಬಡಾವಣೆಗಳಿಗೂ ನೀರು ನುಗ್ಗಿರುವ ಪರಿಣಾಮ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಅವಾಂತರಕ್ಕೆ ಸರಿಯಾದ ಒಳಚರಂಡಿ ಇಲ್ಲದಿರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement