ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕು ಪಡೆಯುತ್ತಿದೆ. ನಗರದ ಕೆಲ ಭಾಗಗಳಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಹೆಬ್ಬಾಳ ಫ್ಲೈ ಓವರ್ ಮೇಲೆ ಮಳೆ ನೀರು ನಿಂತಿದ್ದ ಪರಿಣಾಮ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ವಾಹನ ಸವಾರರ ಪರದಾಡಿದರು.
Advertisement
ಕೊಡಗಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೇ ಆರೆಂಜ್ ಅಲರ್ಟ್ ಬಳಿಕ ಇದೀಗ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 20 ರಿಂದ 23 ರವರೆಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದ್ದು, 204.5 ಮಿಲಿ ಮೀಟರ್ ಮಳೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ, ನದಿ ತೊರೆ, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ.
Advertisement
Advertisement
ದಕ್ಷಿಣ ಕನ್ನಡದಲ್ಲಿ ಇದೇ 20ರಿಂದ 22ರವರೆಗೆ 200 ಮಿಲಿ ಮೀಟರ್ ಮಳೆಯ ಮುನ್ಸೂಚನೆ ನೀಡಲಾಗಿದ್ದು, ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಷಾಢದಲ್ಲಿ ಇದೇ ಮೊದಲಿಗೆ ಮಳೆಯಾಗಿದ್ದು ಇನ್ನೂ ಮೂರು ದಿನ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕಳೆದ 48 ಗಂಟೆಗಳಿಂದ ಸೂರ್ಯನ ದರ್ಶನ ಇಲ್ಲವಾಗಿದ್ದು, ಮೋಡ ಕವಿದ, ಮಂಜು ಮುಸುಕಿದ ವಾತಾವರಣ ಜಿಲ್ಲೆಯಲ್ಲಿ ಕಂಡುಬಂದಿದೆ. ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ಹಾಗೂ ವಿರಾಜಪೇಟೆ ತಾಲ್ಲೂಕಿನ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ. ಇಂದು ಬೆಳಗ್ಗಿನಿಂದಲೂ ಭಾರೀ ಮಳೆಯಾಗಿದ್ದು ಮಂಗಳೂರಿನ ರಸ್ತೆಗಳಲ್ಲಿ ಮಳೆನೀರು ಹೊಳೆಯಂತೆ ಹರಿದಿದೆ. ಮಂಗಳೂರು ರೈಲು ನಿಲ್ದಾಣದ ಟಿಕೆಟ್ ಕೌಂಟರ್ ನೀರಿನಲ್ಲಿ ತುಂಬಿತ್ತು. ರಸ್ತೆ ಸಂಚಾರಕ್ಕೂ ತೊಡಕಾಗಿತ್ತು.
Advertisement
ಬಾಗಲಕೋಟೆಯಲ್ಲೂ ಇಂದು ಸಂಜೆ ವೇಳೆಗೆ ಉತ್ತಮ ಮಳೆಯಾಗಿದ್ದು, ಸುಮಾರು ಅರ್ಧ ಗಂಟೆ ಸಮಯ ಬಾಗಲಕೋಟೆ, ನವನಗರ, ವಿದ್ಯಾಗಿರಿ ಸುತ್ತಮುತ್ತ ಮಳೆಯಾಗಿದೆ. ಭರ್ಜರಿ ಮಳೆಯಿಂದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.