ಮಡಿಕೇರಿ: ಪ್ರವಾಸಿಗರ ಹಾಟ್ ಸ್ಪಾಟ್ ಹಸಿರನಾಡು ಕೊಡಗು ಈಗ ಮತ್ತಷ್ಟು ರಂಗೇರಿದೆ. ಹಸಿರ ಕಾನನದ ನಡುವೆ ಧುಮ್ಮಿಕ್ಕಿ ಹರಿಯುವ ಅಬ್ಬಿ ಜಲಪಾತ ಮಳೆಗೆ ಹಾಲ್ನೊರೆಯಂತೆ ಹರಿಯುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮೈದುಂಬಿರುವ ಅಬ್ಬಿ ಜಲಪಾತ ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿಲ್ಲದೆ ಬಣಗುಡುವ ಅಬ್ಬಿ ಫಾಲ್ಸ್ ಮಳೆಗಾಲದಲ್ಲಿ ತನ್ನ ನೈಜ ಸೌಂದರ್ಯವನ್ನು ತೆರೆದುಕೊಂಡು ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಬದಲಾಗುತ್ತೆ.
Advertisement
Advertisement
ರಾಜ್ಯದ ವಿವಿಧೆಡೆಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿಯ ಮಡಿಲಲ್ಲಿ ಮೈಮರೆಯುತ್ತಾರೆ. ಮಡಿಕೇರಿ ಜನತೆಗೆ ಮಳೆಯ ಭಯವಾದರೆ, ಇತ್ತ ಪ್ರವಾಸಿಗರು ಮಳೆಯ ನಡುವೆಯೇ ಮಂಜಿನ ನಗರಿ ಮಡಿಕೇರಿಯ ಟೂರಿಸ್ಟ್ ಜಾಗಗಳಲ್ಲಿ ಸಖಾತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
Advertisement
ಮಂಜಿನ ನಗರಿಗೆ ಸಮೀಪದ ಅಬ್ಬಿ ಜಲಪಾತದ ದೃಶ್ಯ ಕಣ್ಮನ ಸೆಳೆಯುತ್ತಿದೆ. ನಾವು ಬೆಂಗಳೂರಿನಿಂದ ಇದೇ ಮೊದಲ ಬಾರಿಗೆ ಬಂದಿದ್ದೇವೆ. ತುಂಬಾ ಚೆನ್ನಾಗಿದೆ. ಬೋರ್ಗರೆಯುತ್ತಾ ಧುಮುಕುವ ಜಲಧಾರೆ ಮನಮೋಹಕವಾಗಿದೆ. 80 ಅಡಿ ಎತ್ತರದಿಂದ ಹಾಲ್ನೊರೆಯಂತೆ ಹರಿಯುವ ಜಲಪಾತವನ್ನು ನೋಡುತ್ತಾ ನಿಂತರೆ ಸ್ವರ್ಗವೇ ಧರೆಗಿಳಿದಂತೆ ಎಂದು ಪ್ರವಾಸಿಗರಾಧ ರೋಜಾ ಮತ್ತು ಸಚಿನ್ ಸಂತಸ ವ್ಯಕ್ತಪಡಿಸಿದ್ದಾರೆ.