ನವದೆಹಲಿ: ಭಾರತದಲ್ಲಿ ದೀಪಾವಳಿ ಹಬ್ಬ ಪ್ರಾರಂಭವಾಗುತ್ತಿದ್ದಂತೆ, ಹಬ್ಬದ ಹಿನ್ನೆಲೆ 250ಕ್ಕೂ ಅಧಿಕ ವಿಶೇಷ ರೈಲುಗಳು ಇಂದು ಓಡಾಡಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ (Indian Railway Department) ತಿಳಿಸಿದೆ.
ಪ್ರತೀ ವರ್ಷ ದೀಪಾವಳಿ, ಛತ್ ಪೂಜೆಯ ಸಂದರ್ಭದಲ್ಲಿ ಭಾರತೀಯ ರೈಲ್ವೆ ಹೆಚ್ಚಿನ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ತಮ್ಮ ಊರಿನಿಂದ ದೂರ ಇದ್ದು ಬೇರೆ, ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹಬ್ಬದ ಸಂದರ್ಭದಲ್ಲಿ ಊರಿಗೆ ಮರಳುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗೆ ಪ್ರಸ್ತುತ ಸಂಚರಿಸುತ್ತಿರುವ ರೈಲುಗಳಲ್ಲಿ ಸೀಟು ಸಿಗದೆ ಪ್ರಯಾಣಿಕರು ಸಾಕಷ್ಟು ಕಷ್ಟ ಅನುಭವಿಸುವ ಸ್ಥಿತಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಾರಿಯೂ 250ಕ್ಕೂ ಅಧಿಕ ವಿಶೇಷ ರೈಲುಗಳು ಹಲವು ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: MUDA Case; ಮುಡಾ ಮಾಜಿ ಆಯುಕ್ತ ನಟೇಶ್ ED ವಶಕ್ಕೆ
Advertisement
Kind Attention to All Passengers!
Here’s the list of Festival Special Trains set to operate on 29th October 2024. pic.twitter.com/NiJtg01gcj
— Ministry of Railways (@RailMinIndia) October 28, 2024
Advertisement
ಸುಮಾರು 40 ರೈಲುಗಳನ್ನು ಮುಂಬೈ ವಿಭಾಗವು ನಿರ್ವಹಿಸುತ್ತದೆ. ಇದರಲ್ಲಿ 22 ರೈಲುಗಳು ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಜನಪ್ರಿಯ ಸ್ಥಳಗಳಿಗೆ ಪ್ರಯಾಣಿಸುತ್ತವೆ. ಪೂರ್ವ ರೈಲ್ವೆಯಿಂದ (ಇಆರ್) ಸೋಮವಾರ 50 ವಿಶೇಷ ರೈಲುಗಳು ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ 400 ಹೆಚ್ಚುವರಿ ಸೇವೆಗಳನ್ನು ಒದಗಿಸುತ್ತಿದೆ ಎಂದು ಘೋಷಿಸಿತು. ಈ ವರ್ಷ ಪೂರ್ವ ರೈಲ್ವೆ ವಿಶೇಷ ರೈಲುಗಳ ಸಂಖ್ಯೆಯನ್ನು 33 ರಿಂದ 50 ಕ್ಕೆ ಹೆಚ್ಚಿಸಿದೆ ಎಂದು ಪೂರ್ವ ರೈಲ್ವೆಯ ಪಿಆರ್‌ಒ ಕೌಶಿಕ್ ಮಿತ್ರ ತಿಳಿಸಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಣೆ – ದೆಹಲಿ, ಪಶ್ಚಿಮ ಬಂಗಾಳ ಜನರಿಗೆ ಸಿಗಲ್ಲ ಸೌಲಭ್ಯ
Advertisement
Advertisement
ಮುಂಬೈನ (Mumbai) ಬಾಂದ್ರಾ ನಿಲ್ದಾಣದಲ್ಲಿ ದುರಂತದ ಕಾಲ್ತುಳಿತದ ಘಟನೆಯ ನಂತರ, ಭಾರತೀಯ ರೈಲ್ವೆಯು ಬಾಂದ್ರಾ ಟರ್ಮಿನಸ್, ಸೂರತ್, ಉಧ್ನಾ, ವಡೋದರಾ ಮತ್ತು ಅಹಮದಾಬಾದ್‌ನಂತಹ ನಿರ್ಣಾಯಕ ಹೈ-ಟ್ರಾಫಿಕ್ ನಿಲ್ದಾಣಗಳಲ್ಲಿ ಗರಿಷ್ಠ ಸಿಬ್ಬಂದಿ ನಿಯೋಜನೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಘೋಷಿಸಿತು. ಮುಂಬೈ ಸೆಂಟ್ರಲ್, ದಾದರ್, ಬಾಂದ್ರಾ ಟರ್ಮಿನಸ್, ಬೊರಿವಲಿ, ವಸೈ ರೋಡ್, ವಾಪಿ, ವಲ್ಸಾದ್, ಉಧ್ನಾ ಮತ್ತು ಸೂರತ್ ಸೇರಿದಂತೆ ಪ್ರಮುಖ ಮುಂಬೈ ವಿಭಾಗದ ನಿಲ್ದಾಣಗಳಲ್ಲಿ ನ.8ರವರೆಗೆ ಪ್ಲಾಟ್‌ಫಾರ್ಮ್ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಈ ಕ್ರಮವು ಜನಸಂದಣಿಯನ್ನು ನಿಯಂತ್ರಿಸಲು ಮತ್ತು ನಿಲ್ದಾಣದ ಪ್ರದೇಶಗಳಲ್ಲಿ ಸಂಚಾರವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಪಶ್ಚಿಮ ರೈಲ್ವೆಯು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೀತ್ ಅಭಿಷೇಕ್ ಹೇಳಿದರು. ಇದನ್ನೂ ಓದಿ: ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಿದ್ರೆ ಹುಷಾರ್! – ದೇವೀರಮ್ಮನ ಭಕ್ತರಿಗೆ ಖಾಕಿ ಖಡಕ್ ಎಚ್ಚರಿಕೆ