ನವದೆಹಲಿ: ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ ರೈಲ್ವೆ ಇಲಾಖೆಯ ಪ್ರಯಾಣಿಕರ ಸೌಲಭ್ಯ ಸಮಿತಿ ಸಮ್ಮತಿಸಿದೆ. 2018ರ ಜನವರಿ 1ರಿಂದ ಈ ಸೌಲಭ್ಯ ಸಿಗಲಿದೆ.
Advertisement
ಟಿಕೆಟ್ ವಿತರಿಸಲಾಗುವ ಪ್ರದೇಶಕ್ಕೆ ತಕ್ಕಂತೆ ಆಯಾ ರಾಜ್ಯದ ಭಾಷೆಯಲ್ಲಿ ಟಿಕೆಟ್ ಮುದ್ರಣವಿರಲಿದೆ. ಅಂದ್ರೆ ನೀವು ಕನ್ಯಾಕುಮಾರಿಯಿಂದ ಶುರುವಾಗಿ 5 ರಾಜ್ಯಗಳನ್ನ ಸಂಚರಿಸೋ ರೈಲಿಗೆ ಕರ್ನಾಟಕದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದ್ರೆ ನಿಮ್ಮ ಟಿಕೆಟ್ ಕನ್ನಡದಲ್ಲೇ ಇರಲಿದೆ.
Advertisement
ಬುಧವಾರದಂದು ನಡೆದ ಸಭೆಯಲ್ಲಿ ಸಮಿತಿಯ ಸದಸ್ಯರಾದ ಆಶೀರ್ವತಂ ಆಚಾರಿ ಅವರು ಈ ವಿಚಾರವನ್ನ ಪ್ರಸ್ತಾಪಿಸಿದ ನಂತರ ಸಮಿತಿ ಇದಕ್ಕೆ ಸಮ್ಮತಿ ಸೂಚಿಸಿದೆ.
Advertisement
ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಆಚಾರಿ, ತಮಿಳುನಾಡಿನಲ್ಲಿ ಸಾಕಷ್ಟು ಜನ ರೈಲ್ವೆ ಟಿಕೆಟ್‍ನಿಂದ ತೊಂದರೆ ಅನುಭವಿಸುತ್ತಿದ್ದರು. ಕೆಲವರಿಗೆ ಅವರು ಸರಿಯಾದ ಟಿಕೆಟ್ ಹೊಂದಿದ್ದಾರಾ ಇಲ್ಲವಾ ಎಂಬುದೇ ಗೊತ್ತಿರುತ್ತಿರಲಿಲ್ಲ. ಟಿಕೆಟ್ ಮೇಲೆ ಮುದ್ರಣವಾಗಿರೋದನ್ನ ಓದಲು ಬಾರದೆ ಹಲವು ಬಾರಿ ತಮ್ಮದಲ್ಲದ ತಪ್ಪಿಗೆ ಜನ ದಂಡ ಕಟ್ಟಿದೂ ಇದೆ ಎಂದು ಹೇಳಿದ್ದಾರೆ.
Advertisement
ಮೊದಲಿಗೆ ಅಧಿಕಾರಿಗಳು ಮೂರನೇ ಭಾಷೆಯನ್ನ ಸೇರಿಸಲು ತಯಾರಿರಲಿಲ್ಲ. ಯಾಕಂದ್ರೆ ದೀರ್ಘ ಕಾಲದಿಂದ ದ್ವಿಭಾಷಾ ನೀತಿಯ ಜೊತೆಗೆ ಕೆಲಸ ಮಾಡಿದ್ರು. ಮತ್ತೊಂದು ಕಾರಣವೆಂದರೆ ಅವರು ಇನ್ನೂ ಆರ್ಕಿಯಾಕ್ ಕೊಬೊಲ್ ಸಾಫ್ಟ್ ವೇರ್ ಬಳಸುತ್ತಿದ್ದು, ಇದನ್ನು ಕೂಡಲೇ ಬದಲಾಯಿಸೋದು ಕಷ್ಟವಾಗಿತ್ತು.
ಅದ್ರೆ ಡಿಜಿಟಲ್ ಯುಗದಲ್ಲಿ ಇದನ್ನ ಪರಿಗಣಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈಲ್ವೆ ಇಲಾಖೆ ಅತ್ಯಂತ ದೊಡ್ಡ ಸೇವಾ ಪೂರೈಕೆದಾರ ಆಗಿದೆ. ಈಗಿನ ದಿನಗಳಲ್ಲಿ ಸೆಲ್‍ಫೋನ್ ಸಂಸ್ಥೆಗಳೂ ಕೂಡ ಶುಲ್ಕ ರಹಿತ ನಂಬರ್‍ಗೆ ಕರೆ ಮಾಡಿದಾಗ 3 ಭಾಷೆಗಳಲ್ಲಿ ಸೇವೆ ನೀಡುತ್ತಿವೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಮೂರನೆಯ, ಸ್ಥಳೀಯ ಭಾಷೆಯನ್ನು ತರುವುದು ನಮ್ಮ ಕರ್ತವ್ಯವಲ್ಲವೇ ಎಂದು ಆಚಾರಿ ಹೇಳಿದ್ದಾರೆ.
ಈ ವರ್ಷಾಂತ್ಯದ ವೇಳೆಗೆ ಸಾಫ್ಟ್ ವೇರ್ ಅಪ್‍ಡೇಟ್ ಮಾಡಲಾಗುತ್ತದೆ. ಇದು ಎಲ್ಲಾ ವರ್ಗದ ಪ್ರಯಾಣಕ್ಕೆ ಹಾಗೂ ಕೌಂಟರ್‍ಗಳಲ್ಲಿ ವಿತರಿಸಲಾಗುವ ಪ್ಯಾಸೆಂಜರ್ ರೈಲುಗಳ ಟಿಕೆಟ್‍ಗಳಿಗೆ ಅನ್ವಯವಾಗಲಿದೆ. ಆದ್ರೆ ಆನ್‍ಲೈನ್‍ನಲ್ಲಿ ಬುಕಿಂಗ್ ಮಾಡಿದಾಗ ಅನ್ವಯವಾಗುವುದಿಲ್ಲ. (ಜಗತ್ತಿನ ಯಾವುದೇ ಭಾಗದಲ್ಲಿದ್ರೂ ಆನ್‍ಲೈನ್ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಈ ವೇಳೆ ಸ್ಥಳೀಯ ಭಾಷೆಯನ್ನು ಅಳವಡಿಸುವುದು ಕಷ್ಟವಾಗಲಿದೆ)
ಈ ಮೂಲಕ ಹಿಂದಿ ಹೇರಿಕೆ ವಿರುದ್ಧ ನಡೆಸಲಾಗಿದ್ದ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ. ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಇರಲಿದೆ ಎಂಬುದನ್ನು ಕೇಳಲು ತಾತ್ಕಾಲಿಕವಾಗಿ ಖುಷಿಯ ವಿಚಾರ. ಆದ್ರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಟಿಕೆಟ್ ಲಭ್ಯವಿದೆ. ಆದ್ರೆ ದೇಶದೆಲ್ಲೆಡೆ ಹಿಂದಿ ಟಿಕೆಟ್ ಲಭ್ಯತೆ ಹಾಗೇ ಇದೆ. ಆದ್ರೂ ಈ ಕ್ರಮವನ್ನ ಸ್ವಾಗತಿಸುತ್ತೇವೆ ಎಂದು ಕಳೆದ ವಾರ ಬೆಂಗಳೂರಿನಲ್ಲಿ #ಹಿಂದಿಬೇಡ ಅಭಿಯಾನ ಮಾಡಿದ್ದ ವಲ್ಲೀಶ್ ಕುಮಾರ್ ಪ್ರತಿಕೆಯೊಂದಕ್ಕೆ ಹೇಳಿದ್ದಾರೆ.