ನವದೆಹಲಿ: ಶೀಘ್ರದಲ್ಲೇ ಭಾರತೀಯ ರೈಲ್ವೆ ಇಲಾಖೆ ಖಾಸಗಿ ಕಂಪೆನಿಗಳಿಗೆ ತಮ್ಮ ಸ್ವಂತ ನಿಲ್ದಾಣಗಳ ಮೂಲಕ ಸರಕು ಸಾಗಣೆ ರೈಲುಗಳ ಓಡಾಟ ನಡೆಸಲು ಅನುಮತಿ ನೀಡಲಿದೆ.
ಸಿಮೆಂಟ್, ಸ್ಟೀಲ್, ರಾಸಾಯನಿಕ ಮತ್ತು ಗೊಬ್ಬರ, ಧಾನ್ಯ ಹೀಗೆ ವಿವಿಧ ವಲಯದ ಕಂಪೆನಿಗಳು ಈ ಯೋಜನೆಯಡಿ ತಮ್ಮದೇ ಸ್ವಂತ ಸರಕು ಸಾಗಣೆ ರೈಲನ್ನು ಹೊಂದಲು ಆಸಕ್ತಿ ತೋರಿವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಈ ಖಾಸಗಿ ನಿಲ್ದಾಣಗಳ ಮೂಲಕ ನಾವು 2 ರಿಂದ 2.5 ಕೋಟಿ ಟನ್‍ಗಳಷ್ಟು ಲೋಡ್ ಸಾಮಥ್ರ್ಯವನ್ನು ಹೆಚ್ಚಿಸಬಹುದು. ಕಲ್ಲಿದ್ದಲು ಹೊರತುಪಡಿಸಿ ಬೇರೆ ಎಲ್ಲಾ ಸರಕುಗಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ವಿವಿಧ ವಲಯಗಳ ಸಂಸ್ಥೆಗಳು ಮುಂದೆ ಬಂದು ಬಂಡವಾಳ ಹಾಕಿ ಅವರಿಗೆ ಅನುಕೂಲಕರವಾದ ಸ್ಥಳಗಳಲ್ಲಿ ನಿಲ್ದಾಣಗಳನ್ನ ನಿರ್ಮಿಸಿಕೊಳ್ಳಬೇಕೆಂದು ಬಯಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಒಂದು ವೇಳೆ ಈ ಯೋಜನೆ ಯಶಸ್ವಿಯಾದ್ರೆ ಮುಂದೆ ಖಾಸಗಿ ಪ್ಯಾಸೆಂಜರ್ ರೈಲುಗಳ ಸಂಚಾರಕ್ಕೂ ಕೂಡ ದಾರಿ ಮಾಡಿಕೊಡಬಹುದಾಗಿದೆ. ಟಾಟಾ ಸ್ಟೀಲ್, ಅದಾನಿ ಆಗ್ರೋ, ಕ್ರಿಬ್ಕೋ ಸೇರಿದಂತೆ ಅನೇಕ ಕಂಪೆನಿಗಳು ಈಗಾಗಲೇ ಸ್ವಂತ ಖಾಸಗಿ ನಿಲ್ದಾಣಗಳನ್ನ ಹೊಂದಿವೆ.
Advertisement
ರೈಲ್ವೆ ಇಲಾಖೆಯು ಪ್ರಸಕ್ತ ವರ್ಷಕ್ಕೆ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದಲ್ಲಿ 55 ಖಾಸಗಿ ಸರಕು ಸಾಗಣೆ ನಿಲ್ದಾಣಗಳಿಗೆ ಅನುಮತಿ ನೀಡಲು ನಿರ್ಧರಿಸಿದೆ. ಈ ಯೋಜನೆಯಡಿ ಸಂಸ್ಥೆಗಳು ಭಾರತೀಯ ರೈಲ್ವೆಯ ಬೋಗಿಗಳನ್ನ ಭೋಗ್ಯಕ್ಕೆ ಪಡೆಯಬಹುದು ಅಥವಾ ಕಂಪೆನಿಗಳು ತಮಗೆ ಬೇಕಾದಂತೆ ಬೋಗಿಗಳನ್ನ ತಯಾರಿಸಿಕೊಂಡು ತಮ್ಮ ಖಾಸಗಿ ನಿಲ್ದಾಣಗಳ ಮೂಲಕ ಅನುಕೂಲಕ್ಕೆ ತಕ್ಕಂತೆ ಓಡಾಟ ಮಾಡಬಹುದಾಗಿದೆ. ಆದರೂ ರೈಲಿನ ನಿರ್ವಹಣೆಯನ್ನ ರೈಲ್ವೆ ಇಲಾಖೆಯೇ ನೋಡಿಕೊಳ್ಳಲಿದ್ದು, ಕಂಪೆನಿಗಳು ಟ್ರ್ಯಾಕ್ ಮತ್ತು ಇತರೆ ಸೇವೆಗಳಿಗೆ ಶುಲ್ಕ ಕಟ್ಟಬೇಕಾಗುತ್ತದೆ. ಶೀಘ್ರದಲ್ಲೇ ರೈಲ್ವೆ ಅಭಿವೃದ್ಧಿ ಪ್ರಾಧಿಕಾರಿವನ್ನು ಸ್ಥಾಪಿಸಲಾಗುತ್ತಿದ್ದು, ಶುಲ್ಕವನ್ನ ಪ್ರಾಧಿಕಾರವೇ ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
17ನೇ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆ 110.7 ಕೋಟಿ ಟನ್‍ಗಳಷ್ಟು ಲೋಡಿಂಗ್ ಮಾಡಿ ದಾಖಲೆ ಬರೆದಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ 120 ಕೋಟಿ ಟನ್‍ಗಳಷ್ಟು ಲೋಡಿಂಗ್ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರಿ ಹೊಂದಿದ್ದಾರೆ.