– ಕುಂಭಮೇಳಕ್ಕೆ ತೆರಳುತ್ತಿದ್ದ 18 ಭಕ್ತರು ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಬಲಿ
ನವದೆಹಲಿ: ದೆಹಲಿ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಭಾರಿ ಜನದಟ್ಟಣೆಯಲ್ಲಿ ಪ್ರಯಾಣಿಕರೊಬ್ಬರು ಮೆಟ್ಟಿಲಿನಿಂದ ಜಾರಿಬಿದ್ದಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಉತ್ತರ ರೈಲ್ವೆಯ ಸಿಪಿಆರ್‌ಒ ಹಿಮಾಂಶು ಶೇಖರ್ ಉಪಾಧ್ಯಾಯ ತಿಳಿಸಿದ್ದಾರೆ.
Advertisement
ನವದೆಹಲಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 13 ಮತ್ತು 14 ಜನದಟ್ಟಣೆಯಿಂದ ಕೂಡಿತ್ತು. ಅನೇಕ ಜನರು ಎರಡು ರೈಲುಗಳನ್ನು ಹತ್ತಲು ಕಾಯುತ್ತಿದ್ದರು. ಮಾಗ್ಧ್ ಎಕ್ಸ್‌ಪ್ರೆಸ್ ಮತ್ತು ಜಮ್ಮು ಕಡೆಗೆ ಹೋಗುವ ಇನ್ನೊಂದು ರೈಲು ವಿಳಂಬವಾಯಿತು. ಈ ಮಧ್ಯೆ, ಮಹಾ ಕುಂಭಕ್ಕಾಗಿ ವಿಶೇಷ ರೈಲು, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್, ರಾತ್ರಿ 10:10 ಕ್ಕೆ ಪ್ಲಾಟ್‌ಫಾರ್ಮ್ ಸಂಖ್ಯೆ 14 ರಿಂದ ಹೊರಡಬೇಕಿತ್ತು. ಪ್ರಯಾಗ್‌ರಾಜ್‌ಗೆ ರೈಲು ಹೋಗುವ ಸಮಯ ಹತ್ತಿರವಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಪ್ಲಾಟ್‌ಫಾರ್ಮ್‌ಗೆ ಧಾವಿಸಲು ಪ್ರಾರಂಭಿಸಿದರು. ಇದು ಜನದಟ್ಟಣೆಯನ್ನು ಹೆಚ್ಚಿಸಿತು ಎಂದು ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಉಸಿರು ಚೆಲ್ಲಿದ ಪ್ರಯಾಣಿಕರು – ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?
Advertisement
Advertisement
ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೆಯು ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಕೂಡ ರಚಿಸಿದೆ. ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದೇವು ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಭಾಗವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ತನಿಖೆ ಆರಂಭಿಸಿರುವ ಸಮಿತಿಯು, ನವದೆಹಲಿ ರೈಲು ನಿಲ್ದಾಣದ ಎಲ್ಲಾ ವಿಡಿಯೋ ತುಣುಕನ್ನು ಪಡೆದುಕೊಳ್ಳಲು ಆದೇಶ ನೀಡಿದೆ. ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ
ನಿನ್ನೆ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ವಿಳಂಬವಾಗಿ ಬಂದ ಕಾರಣ ಮತ್ತು ಮಹಾ ಕುಂಭಮೇಳಕ್ಕೆ ತೆರಳಲು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ವಿಳಂಬವಾದ ಪರಿಣಾಮ ಕಾಲ್ತುಳಿತ ಉಂಟಾಯಿತು. ಪರಿಣಾಮ 11 ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭಾರತದಾದ್ಯಂತ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತ – ಪ್ರಧಾನಿ ಮೋದಿ ಸೇರಿ ಗಣ್ಯರ ವಿಷಾದ