ರಾಯ್ಪುರ: ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ 10 ತಿಂಗಳ ಹೆಣ್ಣು ಮಗುವಿಗೆ ರೈಲ್ವೆ ಇಲಾಖೆಯು ಅನುಕಂಪ ನೌಕರಿ ಆಫರ್ ನೀಡಿದೆ.
ಛತ್ತೀಸಗಢದಲ್ಲಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವಿಗೀಡಾದರು. ಅವರ 10 ತಿಂಗಳ ಮಗುವಿಗೆ ನೌಕರಿ ಆಫರ್ ನೀಡಿದೆ. ಆಕೆ 18 ವರ್ಷ ವಯಸ್ಸಿನ ನಂತರ ರಾಷ್ಟ್ರೀಯ ಸಾರಿಗೆಯಲ್ಲಿ ಕೆಲಸ ಮಾಡಬಹುದು. ಅನುಕಂಪದ ಆಧಾರದ ಮೇಲೆ ಈ ವಯಸ್ಸಿನ ಮಗುವಿಗೆ ಇಂತಹ ಆಫರ್ ನೀಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು
Advertisement
Advertisement
ಜುಲೈ 4 ರಂದು, ರಾಯ್‌ಪುರ ರೈಲ್ವೆ ವಿಭಾಗದ ಆಗ್ನೇಯ ಕೇಂದ್ರ ರೈಲ್ವೆಯ ಸಿಬ್ಬಂದಿ ಇಲಾಖೆ (SECR)ಯಲ್ಲಿ 10 ತಿಂಗಳ ಹೆಣ್ಣು ಮಗುವಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿಗಾಗಿ ನೋಂದಾಯಿಸಲಾಗಿದೆ.
Advertisement
Advertisement
ಮಗುವಿನ ತಂದೆ ರಾಜೇಂದ್ರ ಕುಮಾರ್ ಭಿಲಾಯಿಯ ರೈಲ್ವೆ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಜೂನ್ 1 ರಂದು ಅವರು ತಮ್ಮ ಪತ್ನಿಯೊಂದಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಮಗು ಅಪಾಯದಿಂದ ಪಾರಾಯಿತು. ರಾಯಪುರ ರೈಲ್ವೆ ವಿಭಾಗವು ನಿಯಮಗಳ ಪ್ರಕಾರ ಕುಮಾರ್ ಅವರ ಕುಟುಂಬಕ್ಕೆ ಎಲ್ಲಾ ಸಹಾಯವನ್ನು ಒದಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ದಾಖಲೆಗಳಲ್ಲಿ ಅಧಿಕೃತ ನೋಂದಣಿ ಮಾಡಲು ಮಗುವಿನ ಬೆರಳಚ್ಚುಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನಕ್ಕೆ ಕೊಂಕು