ನವದೆಹಲಿ: ಭಾರತೀಯ ರೈಲ್ವೇ ಪ್ರಯಾಣಿಕರ ನಿದ್ದೆಯ ಅವಧಿಯಲ್ಲಿ 1 ಗಂಟೆ ಕಡಿತಗೊಳಿಸಿದ್ದು, ಇನ್ನು ಮುಂದೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಮಾಡಬೇಕು.
ಹೌದು. ಕೆಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯಾಣಿಕರು 8 ಗಂಟೆ ಮಾತ್ರ ನಿದ್ರಿಸಬೇಕು ಎಂದು ಭಾರತೀಯ ರೈಲ್ವೇ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.
Advertisement
ಈ ಹಿಂದೆ ರಾತ್ರಿ 9 ರಿಂದ 6 ಗಂಟೆಯವರೆಗೆ ರೈಲಿನಲ್ಲಿ ನಿದ್ರೆ ಮಾಡಬಹುದಾಗಿತ್ತು. ಆದರೆ ಮಧ್ಯದ ಸೀಟ್ ನವರು ನಿದ್ದೆ ಮಾಡಿದ್ದರೆ ಕೆಳಗಿನ ಸೀಟ್ ನವರಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
Advertisement
Advertisement
ಈ ಸುತ್ತೋಲೆಯಲ್ಲಿ ಕೆಲವು ಪ್ರಯಾಣಿಕರಿಗೆ ವಿನಾಯಿತಿಯನ್ನು ನೀಡಲಾಗಿದೆ. ಅಂಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಗರ್ಭಿಣಿ ಪ್ರಯಾಣಿಕರಿಗೆ ಹೆಚ್ಚಿನ ಸಮಯ ನಿದ್ರಿಸುವ ಅವಕಾಶ ನೀಡಲಾಗಿದೆ.
Advertisement
ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಸಮಯ ನಿದ್ದೆ ಮಾಡುತ್ತಿದ್ದರು. ಟಿಕೆಟ್ ಇಲ್ಲದೇ ಇದ್ದಲ್ಲಿ ಟಿಟಿಇ ಬಂದಾಗ ಪ್ರುಯಾಣಿಕರು ಕಳ್ಳ ನಿದ್ದೆಗೆ ಜಾರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೆಲವೊಮ್ಮೆ ಪ್ರಯಾಣಿಕರು ಕೆಳಗಿನ ಬರ್ತ್ ಮೇಲೆ ಕುಳಿತು ಪ್ರಯಾಣಿಸುತ್ತಿರುತ್ತಾರೆ. ಅವರ ಜೊತೆ ಬಂದಂತಹ ಸಹ ಪ್ರಯಾಣಿಕರು ಮೇಲಿನ ಮತ್ತು ಮಧ್ಯದ ಬರ್ತ್‍ಗಳ ಮೇಲೆ ಮಲಗಿರುತ್ತಾರೆ. ತಮ್ಮ ನಿಲ್ದಾಣ ಬಂದಾಗ ಹಲವು ಬಾರಿ ಕೆಳಗೆ ಕುಳಿತಿದ್ದ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ನಡೆಯುತ್ತಿರುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಇವುಗಳನ್ನು ನಿವಾರಿಸಲು ರೈಲಿನ ನಿದ್ದೆಯ ಅವಧಿಯನ್ನು 1 ಗಂಟೆ ಕಡಿತಗೊಳಿಸಲಾಗಿದೆ ಎಂದು ಸಚಿವಾಯಲದ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದರು.