ಹಾಸನ: ರೈಲಿನಲ್ಲಿ (Train) ಪ್ರಯಾಣಿಸುತ್ತಿದ್ದ ವೃದ್ಧ ಪ್ರಯಾಣಿಕರನ್ನು ರೈಲ್ವೆ ಇಲಾಖೆ ಮಹಿಳಾ ಪೊಲೀಸ್ ಸಿಬ್ಬಂದಿ (Women Police Personnel) ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಹಾಸನ (Hassan) ಜಿಲ್ಲೆ, ಅರಸೀಕೆರೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಜನರಲ್ ಟಿಕೆಟ್ ಪಡೆದು ತಾಳಗುಪ್ಪ-ಮೈಸೂರು ರೈಲಿನಲ್ಲಿ ವಯೋವೃದ್ಧರು, ಮಹಿಳೆಯರು ಹಾಗೂ ವಿಶೇಷ ಚೇತನರು ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಸೀಟ್ ಸಿಗದ ಕಾರಣ ರೈಲಿನಲ್ಲಿ ನಿಂತೇ ವಯೋವೃದ್ಧರು, ಮಹಿಳೆಯರು ಹಾಗೂ ವಿಶೇಷ ಚೇತನರು ತೆರಳುತ್ತಿದ್ದರು. ರೈಲು ಫುಲ್ ರಶ್ ಆಗಿದ್ದರಿಂದ ಅರಸೀಕೆರೆಯಲ್ಲಿ 150 ಪ್ರಯಾಣಿಕರನ್ನು ಕೆಳಗಿಳಿಸಿ ಬೇರೆ ರೈಲಿನಲ್ಲಿ ಬರುವಂತೆ ರೈಲ್ವೆ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಸೂಚಿಸಿದ್ದಾರೆ. ಇದನ್ನೂ ಓದಿ: ಒತ್ತುವರಿ ತೆರವು ಕಾರ್ಯದ ವೇಳೆ ತಾಯಿ, ಮಗಳು ಬೆಂಕಿಗಾಹುತಿ- ಕೊಲೆ ಪ್ರಕರಣ ದಾಖಲು
Advertisement
Advertisement
ಅರಸೀಕೆರೆಯ ರೈಲ್ವೆ ನಿಲ್ದಾಣದಲ್ಲಿ ಇಳಿದು ಉಳಿದ ಬೋಗಿಗಳಲ್ಲಿ ಜಾಗವಿದೆಯಾ ಎಂದು ವಯೋವೃದ್ಧರು ಹುಡುಕುತ್ತಿದ್ದರು. ಈ ವೇಳೆ ಸ್ವಲ್ಪ ಕುಳಿತು ಇಲ್ಲೇ ಕಾಯಿರಿ, ಬೇರೆ ರೈಲು ಬರುತ್ತದೆ ಎಂದು ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಮಹಿಳಾ ರೈಲ್ವೆ ಪೊಲೀಸ್ ಸಿಬ್ಬಂದಿ ವೃದ್ಧರೊಬ್ಬರಿಗೆ (Old Man) ಬೈದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಏಕವಚನದಲ್ಲಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಆವಾಜ್ ಹಾಕಿದ್ದು, ಗೂಂಡಾ ವರ್ತನೆ ತೋರಿದ್ದಾರೆ.
Advertisement
ಮಹಿಳಾ ಪೊಲೀಸ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವೃದ್ಧರೊಂದಿಗೆ ದುರ್ವರ್ತನೆ ತೋರಿರುವ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತು ಮಾಡಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k