– ಸಿಸಿಟಿವಿಯಲ್ಲಿ ಯುವಕನ ಕೃತ್ಯ ಸೆರೆ
– ರೈಲ್ವೆ ಸೇತುವೆ ಮೇಲೆ ಅಸಭ್ಯ ವರ್ತನೆ
ಮುಂಬೈ: ಕಾಮುಕನೊಬ್ಬ ರೈಲ್ವೆ ನಿಲ್ದಾಣದ ಸೇತುವೆಯ ಮೇಲೆ ಯುವತಿಯ ಹಿಂಭಾಗವನ್ನು ಅಸಭ್ಯವಾಗಿ ಟಚ್ ಮಾಡಿ, ಕಿಸ್ ಮಾಡಿರುವ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜನವರಿ 25 ರಂದು ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಕಾಮುಕ ಯುವಕ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿರುವುದನ್ನು ಕಾಣಬಹುದು. ಯುವಕ ಯಾವುದೇ ಭಯವಿಲ್ಲದೆ ಒಂಟಿಯಾಗಿ ಹೋಗುತ್ತಿದ್ದ ಯುವತಿಯ ಬಳಿ ಓಡಿ ಹೋಗಿದ್ದಾನೆ. ನಂತರ ಕ್ಷಣಾರ್ಧದಲ್ಲಿ ಆಕೆಗೆ ಕಿಸ್ ಮಾಡಿ ಹಿಂಭಾಗವನ್ನು ಸ್ಪರ್ಶಿಸಿ ಪರಾರಿಯಾಗಿದ್ದಾನೆ.
ಮಾಟುಂಗಾದ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾನೆ. ಗುರುವಾರ ಪ್ರತ್ಯೇಕ ಕಳ್ಳತನ ಪ್ರಕರಣದಲ್ಲಿ ಆರೋಪಿ ಕಾಮುಕನನ್ನು ಬಂಧಿಸಲಾಗಿತ್ತು. ಆಗ ಯುವತಿಗೆ ಮುತ್ತು ಕೊಟ್ಟು ಎಸ್ಕೇಪ್ ಆಗಿದ್ದ ಆರೋಪಿ ಈತನೇ ಎಂದು ಗುರುತಿಸಲಾಗಿದೆ. ಆದರೆ ಆರೋಪಿಯ ವಿರುದ್ಧ ಕಳ್ಳತನದ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಾಮುಕ, ಯುವತಿಗೆ ಬಲವಂತವಾಗಿ ಕಿಸ್ ಮಾಡಿದ್ದಾನೆ. ಅಲ್ಲದೆ ಹಿಂದೆಯಿಂದ ಬಂದು ಅಸಭ್ಯವಾಗಿ ಟಚ್ ಮಾಡಿ ಪರಾರಿಯಾಗಿದ್ದಾನೆ. ಯುವತಿ ಇದರಿಂದ ಶಾಕ್ ಆಗಿ ಸುಮ್ಮನೆ ನಿಂತಿದ್ದರು. ಬಳಿಕ ಸುತ್ತಮುತ್ತ ಯಾರೂ ಇಲ್ಲದನ್ನು ನೋಡಿ ಭಯದಿಂದ ಯುವತಿ ಓಡಿ ಹೋಗಿದ್ದಾರೆ. ಇದೆಲ್ಲವೂ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಯುವತಿ ಯಾವುದೇ ರೀತಿಯ ಕಿರುಕುಳದ ದೂರು ದಾಖಲಿಸಿಲ್ಲ. ಆದರೆ ಯುವತಿಯ ದೂರಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಸಿಕ್ಕಿದೆ ಎಂದು ವರದಿಯಾಗಿದೆ.