ದಾವಣಗೆರೆ: ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ವೃದ್ಧೆಯ ಜೀವ ಉಳಿದಿದೆ. ಚಲಿಸುತ್ತಿರುವ ರೈಲಿನಿಂದ ಕೆಳಗೆ ಬೀಳುತ್ತಿದ್ದ ವೃದ್ಧೆಯನ್ನು ರೈಲ್ವೆ ಪೊಲೀಸರು ರಕ್ಷಿಸಿರುವ ಘಟನೆ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ಟಿ.ಆರ್. ಚೇತನ್ ಅವರು ವೃದ್ಧೆಯ ರಕ್ಷಣೆ ಮಾಡಿದ್ದಾರೆ. ಇಂದು ಮಧ್ಯಾಹ್ನ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲು ದಾವಣಗೆರೆ ನಿಲ್ದಾಣದಲ್ಲಿ ಚಲಿಸುತ್ತಿದ್ದಾಗ ಬೆಂಗಳೂರಿನಿಂದ ಮೀರಜ್‍ಗೆ ಪ್ರಯಾಣಿಸುತ್ತಿ ವೃದ್ಧೆಯೊಬ್ಬರು, ನೀರು ಕುಡಿಯಲೆಂದು ರೈಲು ಚಲಿಸುತ್ತಿರುವಾಗ ತಿಳಿಯದೆ ಇಳಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಒಂದು ಸೀಟ್‍ಗೆ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮ
Advertisement
Advertisement
ಆಗ ಆಯಾತಪ್ಪಿ ರೈಲಿನ ಕೆಳಗೆ ಬೀಳುವ ಸ್ಥಿತಿಯಲ್ಲಿದ್ದರು. ಅದೇ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ರೈಲ್ವೆ ಕಾನ್ಸ್‌ಟೇಬಲ್ ಚೇತನ್ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಚೇತನ್ ವೃದ್ಧೆಯನ್ನು ರಕ್ಷಣೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Advertisement
ಚೇತನ್ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನ ಪಟ್ಟ ವೃದ್ಧೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಮೇಲ್ಮನೆಗೆ ವಿಜಯೇಂದ್ರ ಎಂಟ್ರಿ? ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಬಿಎಸ್‌ವೈ ಪುತ್ರನ ಹೆಸರು ಅಂತಿಮ