Connect with us

Dharwad

ಜೀವದ ಹಂಗು ತೊರೆದು ಸೇತುವೆ ಏರಿ ಚೈನನ್ನು ಬಿಡಿಸಿದ ಗಾರ್ಡ್: ವಿಡಿಯೋ ನೋಡಿ

Published

on

ಹುಬ್ಬಳ್ಳಿ: ಜೀವದ ಹಂಗು ತೊರೆದು ರೈಲ್ವೆ ಗಾರ್ಡ್ ಒಬ್ಬರು ಸೇತುವೆ ಏರಿ ಬೋಗಿಯ ಹೊರಗಡೆ ಸಿಕ್ಕಿಹಾಕಿಕೊಂಡಿದ್ದ ಚೈನನ್ನು ಬಿಡಿಸಿದ್ದಾರೆ.

ರೈಲ್ವೆ ಗಾರ್ಡ್ ಆಗಿರುವ ಎನ್. ವಿಷ್ಣುಮೂರ್ತಿ ಈ ಸಾಹಸ ಮಾಡಿದ್ದಾರೆ. ವಿಷ್ಣುಮೂರ್ತಿ ಅವರು ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡಿದ್ದಾರೆ.

ಡಿಸೆಂಬರ್ 26 ರಂದು ಚಾಮರಾಜನಗರ – ತಿರುಪತಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಇಂಟರ್ ಚೈನನ್ನು ಯಾರೋ ಎಳೆದ ಪರಿಣಾಮ ಶ್ರೀರಂಗಪಟ್ಟಣದ ಬಳಿ ಇರುವ ಗರ್ಡರ್ ಮೇಲ್ಸೇತುವೆ ಮೇಲೆ ನಿಂತಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ವಿಷ್ಣಮೂರ್ತಿ ಅವರು ಯಾವ ಕಾರಣಕ್ಕೆ ದಿಢೀರ್ ಅಂತ ರೈಲು ನಿಂತಿದ್ದು ಎಂದು ಪರಿಶೀಲಿಸಲು ಹೋಗಿದ್ದಾರೆ.

ನಂತರ ಕೊನೆಯ ಬೋಗಿಯಲ್ಲಿ ಇಂಟರ್ ಚೈನ್ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಈ ವೇಳೆ ವಿಷ್ಣುಮೂರ್ತಿ ಅವರು ಹೆಜ್ಜೆ ಇಡಲು ಸಾಧ್ಯವಾಗದ ಗರ್ಡರ್ ಮೇಲ್ಸೇತುವೆ ಮೇಲೆ ನಡೆದುಕೊಂಡು ಹೋಗಿ ರೈಲಿನ ಕೊನೆಯ ಬೋಗಿಯ ಹೊರಗಡೆ ಸಿಲುಕಿಕೊಂಡಿದ್ದ ಚೈನನ್ನು 10 ನಿಮಿಷದಲ್ಲಿ ಬಿಡಿಸಿದ್ದಾರೆ.

ರೈಲಿನಲ್ಲಿ ತೆರೆಳುತ್ತಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವಿಷ್ಣಮೂರ್ತಿ ಅವರ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

https://www.youtube.com/watch?v=ZneNlRRDOs4&feature=youtu.be

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *