ಬೆಳಗಾವಿ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಬ್ರೇಕ್ ಫೇಲ್ ಆದ ಪರಿಣಾಮ ರೈಲ್ವೇ ಹಳಿ ಮೇಲೆ ನಿಂತಿದ್ದು, ಈ ವೇಳೆ ಗೇಟ್‍ಮನ್ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ.
ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈಲು ಬರುವ ವೇಳೆ ಮುಚ್ಚಲಾಗಿತ್ತು. ಇದೇ ಮಾರ್ಗದಲ್ಲಿ ಬಂದ 40 ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಬಸ್ಸು ಬ್ರೇಕ್ ಫೇಲ್ ಆಗಿ ರೈಲ್ವೇ ಗೇಟಿಗೆ ಡಿಕ್ಕಿ ಹೊಡೆದು ಬಳಿಕ ಹಳಿ ಮೇಲೆ ನಿಂತಿದೆ. ಇದೇ ವೇಳೆ ರೈಲು ಬರುತ್ತಿರುವುದನ್ನು ಕಂಡ ಗೇಟ್‍ಮನ್ ತಕ್ಷಣ ರೈಲ್ವೇ ಪೈಲಟ್‍ಗೆ ಕೆಂಪು ಬಾವುಟ ತೋರಿಸಿ ತಡೆದಿದ್ದಾರೆ. ಇದರಿಂದ ಬಸ್ಸಿನಲ್ಲಿದ್ದ ಅಷ್ಟು ಪ್ರಯಾಣಿಕರ ಜೀವ ಉಳಿದಿದೆ.
Advertisement
ರೈಲು ಬರುವುದನ್ನು ಕಂಡು ಕರ್ತವ್ಯ ಪ್ರಜ್ಞೆಯನ್ನು ತೋರಿದ ರೈಲ್ವೇ ಗೇಟ್‍ಮನ್ ಕಾರ್ಯಕ್ಕೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸರಿಯಾಗಿ ಬಸ್ ನಿರ್ವಹಣೆ ಮಾಡದೇ ಅವಘಡಕ್ಕೆ ಕಾರಣವಾಗುತ್ತಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv