ಭುವನೇಶ್ವರ್: ಚಲಿಸುತಿದ್ದ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸಿದ್ದ ಮಹಿಳೆಯನ್ನು ರೈಲ್ವೇ ಎಂಜಿನೀಯರ್ ರಕ್ಷಣೆ ಮಾಡಿದ್ದಾರೆ. ಒಡಿಶಾದ ಕಟಕ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ.
ಈ ಎಲ್ಲ ದೃಶ್ಯಾವಳಿಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈಸ್ಟ್ ಕೋಸ್ಟ್ ರೈಲ್ವೆ, 38 ಸೆಕೆಂಡ್ ಈ ವಿಡಿಯೋವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡು ಚಲಿಸುತ್ತಿರುವ ರೈಲಿನಿಂದ ಇಳಿಯುವ ದುಸ್ಸಾಹಸಕ್ಕೆ ಮುಂದಾಗಬೇಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.
Advertisement
ಶುಕ್ರವಾರ ಪುದುಚೇರಿ-ಹಾವಡಾ ಎಕ್ಸ್ ಪ್ರೆಸ್ (12868) ರೈಲು ಕಟಕ್ ನಿಲ್ದಾಣ ಮಾರ್ಗವಾಗಿ ಹೊರಟ್ಟಿತ್ತು. ಕಟಕ್ ನಿಲ್ದಾಣದಲ್ಲಿ ರೈಲು ನಿಲುಗಡೆಯನ್ನು ಹೊಂದಿರದ ಕಾರಣ ಪ್ಲಾಟ್‍ಫಾರಂನಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಬೋಗಿಯಿಂದ ಹೊರ ಬಂದ ಮಹಿಳೆ ದ್ವಾರದ ಒಂದು ಹ್ಯಾಂಡಲ್ ಹಿಡಿದು ಇಳಿಯಲು ಮುಂದಾಗಿದ್ದಾರೆ. ಆಯತಪ್ಪಿದ ಮಹಿಳೆ ರೈಲಿನಡಿ ಸಿಲುಕುತ್ತಿದ್ದರು. ಕೂಡಲೇ ಎಚ್ಚೆತ್ತ ಪ್ಲಾಟ್‍ಫಾರಂನಲ್ಲಿ ನಿಂತಿದ್ದ ರೈಲ್ವೇ ಎಂಜಿನೀಯರ್ ಮಹಿಳೆಯನ್ನು ರಕ್ಷಿಸಿದ್ದಾರೆ.
Advertisement
.@RailMinIndia A lady passenger had fallen from running12868 Puduchery-HowrahExp #CTC Rly Stn.She was lifted&pushed back2train by T.R.Barik, SSE/TELE/CTC. Incident of yesterday,23 May,at abt 1600hrs. GM @eastcoastrail sanctioned cash award to Shri Barik 4pass sfty consciousness pic.twitter.com/q6ki0HWEPf
— East Coast Railway (@EastCoastRail) May 24, 2019