ಪಾಟ್ನಾ: ನಕಲಿ ದಾಖಲೆ ಸೃಷಿಸಿ ರೈಲು ಇಂಜಿನ್‍ನನ್ನು ರೈಲ್ವೆ ಅಧಿಕಾರಿ ಮಾರಾಟ ಮಾಡಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಡೀಸೆಲ್ ಶೆಡ್‍ನ ರೈಲ್ವೆ ಉದ್ಯೋಗಿ ಪುರ್ನಿಯಾ ಕೋರ್ಟ್ ಸ್ಟೇಷನ್‍ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್‍ನನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಇವನ ಈ ಕೆಲಸಕ್ಕೆ ಭದ್ರತಾ ಸಿಬ್ಬಂದಿ ಮತ್ತು ಇತರೆ ಠಾಣಾ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ
Advertisement
Advertisement
ನಕಲಿ ದಾಖಲೆ ತೋರಿಸಿ ಸಿಬ್ಬಂದಿಗೆ ಗ್ಯಾಸ್ ಕಟರ್‌ನಿಂದ ಇಂಜಿನ್ ಕತ್ತರಿಸುವಂತೆ ಹೇಳಿದ್ದ. ಆದರೆ ಕೊನೆಗೆ ಎಂಜಿನ್‍ನ್ನು ಕತ್ತರಿಸುವಂತೆ ತೋರಿಸಿದನು. ಇಂಜಿನಿಯರ್ ಫ್ಯಾಬ್ರಿಕೇಟೆಡ್ ಡಿಎಂಐ ಪೇಪರ್ ವರ್ಕ್ ಇಟ್ಟುಕೊಂಡು ರೈಲ್ವೆ ಆಸ್ತಿಯನ್ನು ಮಾರಾಟ ಮಾಡಿದ್ದಾನೆ. ಡಿಸೆಂಬರ್ 14 ರಂದು ಅಕ್ರಮ ಮಾರಾಟ ನಡೆದಿದ್ದು, ಎರಡು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ
Advertisement
Advertisement
ಪುರ್ನಿಯಾ ಕೋರ್ಟ್ ಸ್ಟೇಷನ್ ಔಟ್ ಪೋಸ್ಟ್ ಇನ್‍ಚಾರ್ಜ್ ಎಂಎಂ ರೆಹಮಾನ್ ಅರ್ಜಿಯ ಆಧಾರದ ಮೇಲೆ ಬನ್ಮಂಖಿ ಆರ್ ಪಿ ಎಫ್ ಪೋಸ್ಟ್ ನಲ್ಲಿ ಡಿಸೆಂಬರ್ 19ರಂದು ಎಫ್‍ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಎಂಜಿನಿಯರ್ ಮತ್ತು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಏಳು ಜನರ ಹೆಸರನ್ನು ಎಫ್‍ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್ ಉಪಗ್ರಹಗಳು? ದರ ಎಷ್ಟು? ನೆಟ್ ಹೇಗೆ ಸಿಗುತ್ತೆ?