ದಸರಾ, ದೀಪಾವಳಿ ಹಬ್ಬಕ್ಕೆ ರೈಲ್ವೆ ಇಲಾಖೆ ಬಂಪರ್ ಗಿಫ್ಟ್

Public TV
1 Min Read
indian railways

ಹುಬ್ಬಳ್ಳಿ: ದಸರಾ (Dasara) ಮತ್ತು ದೀಪಾವಳಿ (Diwali) ಹಬ್ಬಕ್ಕೆ ದೇಶ ಜನತೆಗೆ ಭಾರತೀಯ ರೈಲ್ವೆ ಇಲಾಖೆ ( Indian Railway Department) ಬಂಪರ್ ಬಹುಮಾನ ನೀಡಿದೆ. ಹಬ್ಬಕ್ಕಾಗಿ ದೂರದೂರಿಗೆ ಪ್ರಯಾಣಕ್ಕೆ ಸೀಟ್ ಬುಕ್ ಮಾಡುವವರು ಇನ್ನು ಚಿಂತೆ ಬಿಡಿ. ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ನಲ್ಲಿ ದುಪ್ಪಟ್ಟು ಟಿಕೇಟ್ ಖರೀದಿಸಿ ಪ್ರಯಾಣ ಮಾಡಬೇಕಿಲ್ಲ. ನಾರಿ ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಸೀಟ್ ಸಿಗುತ್ತಿಲ್ಲ ಎಂದು ಚಿಂತಿಸಬೇಕಿಲ್ಲ.

ರೈಲ್ವೆ ಇಲಾಖೆ ಹಬ್ಬದ ಸಂದರ್ಭದಲ್ಲಿ ಸುಮಾರು 6,000 ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಿದೆ. ರಾಜ್ಯದಲ್ಲೂ ನೈರುತ್ಯ ರೈಲ್ವೆ ವಿಭಾಗದಿಂದ ವಿಶೇಷ ರೈಲು ಸಂಚಾರ ಮಾಡುತ್ತಿದ್ದು, ಹಬ್ಬ ಸಮಯದಲ್ಲಿ 24 ಹೆಚ್ಚುವರಿ ರೈಲು ಸೇವೆ ಲಭಿಸಲಿದೆ. ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ. ಅ.1 ರಿಂದ ನ.30ರ ನಡುವೆ ಈ ವಿಶೇಷ ಸೌಲಭ್ಯವನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕೆದಾರರ 10 ಲಕ್ಷ ಕೋಟಿ ಸಂಪತ್ತು

ಕಳೆದ ಬಾರಿ ಹಬ್ಬದ ಸಮಯದಲ್ಲಿ ಒಟ್ಟು 4,429 ಟ್ರಿಪ್ ಸಂಚಾರದ ಮೂಲಕ ಲಕ್ಷಗಟ್ಟಲೆ ಪ್ರಯಾಣಿಕರು ಆರಾಮದಾಯಕ ಪ್ರಯಾಣ ಸೌಲಭ್ಯಗಳನ್ನು ಪಡೆದಿದ್ದರು. ಇದರ ಯಶಸ್ವಿಯಿಂದ ಈ ಬಾರಿ ರೈಲ್ವೆ ಇಲಾಖೆ ಸಾವಿರಾರು ರೈಲು ಸೌಲಭ್ಯ ನೀಡಿದೆ. ಇದನ್ನೂ ಓದಿ: ಎಲ್ಲಾ ನ್ಯಾಯಾಲಯಗಳಂತೆ ಮನದಲ್ಲಿ ದೊಡ್ಡ ನ್ಯಾಯಾಲಯವಿದೆ, ಅದೇ ಆತ್ಮಶಕ್ತಿಯ ನ್ಯಾಯಾಲಯವೆಂದು ಸಿಎಂ ಹೇಳಿದ್ದಾರೆ: ಡಿಕೆಶಿ

Share This Article