ನವದೆಹಲಿ: ರೈಲ್ವೆ ಬಜೆಟ್‌ನಲ್ಲಿ (Railway Budget) ಕರ್ನಾಟಕಕಕ್ಕೆ (Karnataka) 7,000 ಕೋಟಿ ರೂ.ಗಿಂತ ಹೆಚ್ಚಿನ ಬಜೆಟ್ ನಿಗದಿಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
ಶನಿವಾರ ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಉದ್ಘಾಟನೆ ವೇಳೆ ಮಾತನಾಡಿದ ಅವರು, ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,000 ಕೋಟಿ ರೂ.ಗಿಂತ ಹೆಚ್ಚಿನ ಹಣ ನಿಗದಿಪಡಿಸಲಾಗಿದೆ. 2014 ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ, ಒಟ್ಟು 8 ವಂದೇ ಭಾರತ್ ರೈಲುಗಳು ಕರ್ನಾಟಕವನ್ನು ಸಂಪರ್ಕಿಸಿವೆ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಶಾಸಕರಿಗೆ 2 ಗಂಟೆ ಅವಧಿಯ ನಮಾಜ್ ಬ್ರೇಕ್‌ಗೆ ತಡೆ – ಅಸ್ಸಾಂ ನಿರ್ಧಾರಕ್ಕೆ ಎನ್‌ಡಿಎ ಮೈತ್ರಿಕೂಟದಿಂದಲೇ ವಿರೋಧ
ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ದಕ್ಷಿಣದ ರಾಜ್ಯಗಳ ತ್ವರಿತ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ದಕ್ಷಿಣ ಭಾರತವು ಅಪಾರ ಪ್ರತಿಭೆ, ಸಂಪನ್ಮೂಲಗಳು ಮತ್ತು ಅವಕಾಶಗಳ ನಾಡು ಎಂದು ಬಣ್ಣಿಸಿದ್ದಾರೆ.
ಈ ವರ್ಷ ತಮಿಳುನಾಡಿನ ರೈಲು ಬಜೆಟ್‌ಗೆ 6,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಇದು 2014 ಕ್ಕಿಂತ ಏಳು ಪಟ್ಟು ಹೆಚ್ಚು. ಈಗ ನೂತನ ವಂದೇ ಭಾರತ್ ರೈಲಿನಿಂದಾಗಿ ತಮಿಳುನಾಡಿನಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ ಎಂಟಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭೂಕುಸಿತ – ಐವರು ದುರ್ಮರಣ
ಪ್ರತಿ ಮಾರ್ಗದಲ್ಲಿ ವಂದೇ ಭಾರತ್‌ಗೆ ಬೇಡಿಕೆ ಹೆಚ್ಚಾಗಿದೆ. ಸೆಮಿ ಹೈಸ್ಪೀಡ್ ರೈಲುಗಳ ಆಗಮನವು ಜನರಲ್ಲಿ ತಮ್ಮ ವ್ಯಾಪಾರ, ಉದ್ಯೋಗ ಮತ್ತು ಅವರ ಕನಸುಗಳನ್ನು ವಿಸ್ತರಿಸಲು ವಿಶ್ವಾಸವನ್ನು ತುಂಬಿದೆ. ದೇಶಾದ್ಯಂತ 102 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ 3 ಕೋಟಿಗೂ ಹೆಚ್ಚು ಜನರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.