– ಡಿಕ್ಕಿಯ ರಭಸಕ್ಕೆ ಬಸ್ 3 ಭಾಗ
ಇಸ್ಲಾಮಾಬಾದ್: ರೈಲು ಮತ್ತು ಬಸ್ ನಡುವೆ ಡಿಕ್ಕಿಯಾದ ಪರಿಣಾಮ 30 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಅಪಘಾತ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 30 ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಕ್ಕೂರ್ ಆಯುಕ್ತ ಶಫೀಕ್ ಅಹ್ಮದ್ ಮಹೇಸರ್ ಹೇಳಿದರು.
Advertisement
Advertisement
ರೋಹ್ರಿ ರೈಲ್ವೆ ನಿಲ್ದಾಣದ ಸಮೀಪವಿರುವ ಕಂಧ್ರಾ ರೈಲ್ವೆ ಕ್ರಾಸಿಂಗ್‍ನಲ್ಲಿ ರಾವಲ್ಪಿಂಡಿಯಿಂದ ಕರಾಚಿ ಕಡೆಗೆ ಬರುತ್ತಿದ್ದ 45 ಅಪ್ ಪಾಕಿಸ್ತಾನ್ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರ ಬಸ್‍ಗೆ ಡಿಕ್ಕಿ ಹೊಡೆದಿದೆ. ಇನ್ನೂ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಸುಕ್ಕೂರ್ ನಿಂದ ಪಂಜಾಬ್‍ಗೆ ಹೋಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಜಮೀಲ್ ಅಹ್ಮದ್ ತಿಳಿಸಿದರು.
Advertisement
ಇದೊಂದು ಭೀಕರ ಅಪಘಾತವಾಗಿದೆ. ರೈಲು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಮೂರು ಭಾಗಗಳಾಗಿ ವಿಂಗಡಣೆಯಾಗಿದೆ. ಅಲ್ಲದೇ ಬಸ್ಸನ್ನು ಸುಮಾರು 150-200 ಅಡಿಗಳಷ್ಟು ರೈಲಿನಿಂದ ಎಳೆದುಕೊಂಡು ಹೋಗಿದೆ. ಅಪಘಾತದಲ್ಲಿ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕೊನೆಯುಸಿರೆಳೆದಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದರು.
Advertisement
ರೈಲು ಅತಿ ವೇಗವಾಗಿ ಬರುತ್ತಿತ್ತು. ಇದೇ ವೇಳೆ ಚಾಲಕ ರೈಲ್ವೇ ಮಾರ್ಗವನ್ನು ದಾಟಲು ಪ್ರಯತ್ನಿಸಿದ್ದಾನೆ. ಆಗ ಈ ಅಪಘಾತ ಸಂಭವಿಸಿದೆ. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಪಾಕಿಸ್ತಾನ ರೈಲ್ವೆ ವಕ್ತಾರರು ಹೇಳಿದರು.
ಡಿಕ್ಕಿಯ ರಭಸಕ್ಕೆ ರೈಲಿನ ಎಂಜಿನ್ ಹಾನಿಯಾಗಿದೆ. ರೈಲಿನ ಸಹಾಯಕ ಚಾಲಕ ಗಾಯಗೊಂಡಿದ್ದಾನೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗಾಯಾಳುಗಳನ್ನು ರೋಹ್ರಿ ಮತ್ತು ಸುಕ್ಕೂರ್ ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ.
30 killed, 60 injured as train collides with bus in Pakistan
Read @ANI story | https://t.co/ffU9B7bX4R pic.twitter.com/db8Os0J1b4
— ANI Digital (@ani_digital) February 28, 2020