ವಿಜಯವಾಡ: ಭ್ರಷ್ಟಾಚಾರ ನಿಗ್ರಹ ದಳ(ಸಿಎಬಿ) ಅಧಿಕಾರಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿ 11 ಕೆಜಿ ಚಿನ್ನ ಮತ್ತು ಕೋಟ್ಯಂತರ ಆಸ್ತಿ ಪಾಸ್ತಿಯನ್ನು ವಶಕ್ಕೆ ಪಡೆದಿದೆ.
ಆಂಧ್ರಪ್ರದೇಶ ನಗರ ಯೋಜನೆ ವಿಭಾಗದ ನಿರ್ದೇಶಕ ಗೊಲ್ಲ ವೆಂಕಟ ರಘು ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು 600 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
Advertisement
ವಿಶೇಷ ಏನೆಂದರೆ ಗೊಲ್ಲ ವೆಂಕಟ ರಘು ರೆಡ್ಡಿ ಇನ್ನು ಮೂರು ದಿನಗಳಲ್ಲಿ ನಿವೃತ್ತಿಯಾಗಬೇಕಾಗಿತ್ತು. ಆದರೆ ನಿವೃತ್ತಿ ಆಗುವುದರ ಒಳಗಡೆ ಎಸಿಬಿ ದಾಳಿ ನಡೆಸಿ ಶಾಕ್ ನೀಡಿದೆ.
Advertisement
2009 ರಲ್ಲಿ ಹೈದರಬಾದ್‍ನ ಮುಖ್ಯ ನಗರ ಯೋಜಕನಾಗಿ ವೆಂಕಟ ರಘು ನೇಮಕವಾದ ಬಳಿಕ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡುವ ವಿಚಾರದಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
Advertisement
ಏನು ಸಿಕ್ಕಿದೆ?
ಮನೆಯಲ್ಲಿ 50 ಲಕ್ಷ ರೂ. ನಗದು, 11 ಕೆಜಿ ಚಿನ್ನಾಭರಣಗಳು, 25 ಕೆಜಿ ಬೆಳ್ಳಿ ಆಭರಣ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾಗೂ ದಾಖಲೆಗಳನ್ನು ಅಧಿಕಾರಿಗಳು ಸಿಕ್ಕಿದೆ. ದಾಳಿ ವೇಳೆ ಶಿರಡಿಯಲ್ಲೂ ಲಾಡ್ಜ್ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ವಿಜಯವಾಡದ ಗನ್ನಾವರಂ ಎಂಬಲ್ಲಿ 300 ಎಕರೆ ಭೂಮಿ ಕೂಡ ಹೊಂದಿದ್ದು, ನಾಲ್ಕು ಖಾಸಗಿ ಕಂಪನಿ, ಹಲವೆಡೆ ತೋಟ, ಗದ್ದೆಗಳು ಪತ್ತೆಯಾಗಿವೆ.
Advertisement
ನಿವೃತ್ತಿ ಹಿನ್ನೆಲೆಯಲ್ಲಿ ಗೊಲ್ಲ ವೆಂಕಟ ರಘು ಸ್ನೇಹಿತರಿಗೆ ಪಾರ್ಟಿ ನೀಡಲು ಸಿದ್ಧತೆ ನಡೆಸುತ್ತಿದ್ದರು. ಬಳಿಕ ವಿದೇಶ ಪ್ರವಾಸಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು.