ಮದ್ಯ ನೀತಿ ಪ್ರಕರಣ – ಬೆಳ್ಳಂಬೆಳಗ್ಗೆ 35 ಕಡೆ ಇಡಿ ದಾಳಿ

Public TV
1 Min Read
ED raid

ನವದೆಹಲಿ: ಜಾರಿ ನಿರ್ದೇಶನಾಲಯವು (Enforcement Directorate) ಇಂದು ದೆಹಲಿ (New Delhi), ಪಂಜಾಬ್ (Punjab) ಮತ್ತು ಹೈದರಾಬಾದ್‌ನ (Hyderabad) 35 ಸ್ಥಳಗಳಲ್ಲಿ ದಾಳಿ ನಡೆಸಿದೆ. ದೆಹಲಿ ಸರ್ಕಾರ ಹಿಂಪಡೆದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದೆ.

ಈ ರಾಜ್ಯಗಳಲ್ಲಿ ಮದ್ಯದ ಕಂಪನಿಗಳು, ವಿತರಕರು ಮತ್ತು ಪೂರೈಕೆ ಜಾಲಗಳಿಗೆ ಸಂಬಂಧಿಸಿದ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಕೇಂದ್ರದ ದಾಳಿಯನ್ನು ಕೊಳಕು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

500 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. 3 ತಿಂಗಳಿನಿಂದ 300 ಕ್ಕೂ ಹೆಚ್ಚು ಸಿಬಿಐ, ಇಡಿ ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಮನೀಶ್‌ ಸಿಸೋಡಿಯಾ ನಿವಾಸ, ಕಚೇರಿಗಳ ಮೇಲೂ ದಾಳಿ ನಡೆದವು. ಆದರೆ ಏನು ಸಿಗಲಿಲ್ಲ. ಅವರ ಹೊಲಸು ರಾಜಕಾರಣಕ್ಕಾಗಿ ಎಷ್ಟೋ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ. ಅಂತಹ ದೇಶ ಹೇಗೆ ಪ್ರಗತಿ ಹೊಂದುತ್ತದೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಖರೀದಿದಾರರನ್ನು ಆಕರ್ಷಿಸಲು ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ರಿಯಾಯಿತಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟ ಹೊಸ ಅಬಕಾರಿ ನೀತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ

ಈ ಪ್ರಕರಣದಲ್ಲಿ ಹಲವೆಡೆ ದಾಳಿ ನಡೆಸಿದ ತನಿಖಾ ಸಂಸ್ಥೆ ಕಳೆದ ವಾರ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಬಂಧಿಸಿತ್ತು. ಎಎಪಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ವಿಜಯ್ ನಾಯರ್ ಅವರನ್ನು ಸಿಬಿಐ ಬಂಧಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *