Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

Public TV
1 Min Read
Ramanagara Gas Refilling

ರಾಮನಗರ: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ (Gas Refilling) ಮಾಡ್ತಿದ್ದ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸರು ದಾಳಿ ನಡೆಸಿರೋ ಘಟನೆ ಕನಕಪುರ (Kanakapura) ಟೌನ್‌ನಲ್ಲಿ ನಡೆದಿದೆ.

ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ನಿರೀಕ್ಷಕ ಮನೋಹರ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಅನಂತ್‌ರಾಮ್ ನೇತೃತ್ವದ ತಂಡ, ನಗರದ ಪೈಪ್‌ಲೈನ್ ರಸ್ತೆ ಹಾಗೂ ಸಾಮ್ರಾಟ್ ಅಶೋಕ್ ನಗರದ ಉಮೇಶ್ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದಲೇ ರಾಜಣ್ಣ ಉಚ್ಚಾಟನೆ? – ಆಪ್ತನನ್ನು ಉಳಿಸಲು ಸಿಎಂ ಕಸರತ್ತು

ಈ ವೇಳೆ ವಾಣಿಜ್ಯ ಬಳಕೆಯ 7 ಸಿಲಿಂಡರ್, 2 ಮನೆಬಳಕೆ ಸಿಲಿಂಡರ್ ಹಾಗೂ ರೀಫಿಲ್ಲಿಂಗ್ ಮಾಡುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

Share This Article