ಮಸಾಲೆ ಪದಾರ್ಥ ತಯಾರಿಕಾ ಘಟಕದ ಮೇಲೆ ದಾಳಿ – 842 ಕೆಜಿ ಕಲಬೆರಕೆ ವಸ್ತುಗಳು ಜಪ್ತಿ

Public TV
1 Min Read
Raichuru Adulterated products 3

ರಾಯಚೂರು: ಜಿಲ್ಲೆಯ ಮಾನ್ವಿ (Manvi) ಪಟ್ಟಣದ ಆಹಾರ ಪದಾರ್ಥ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, 842 ಕೆ.ಜಿಯ ಕಲಬೆರಕೆ ವಸ್ತುಗಳನ್ನು (Adulterated Products) ವಶಪಡಿಸಿಕೊಂಡಿದ್ದಾರೆ.

Raichuru Adulterated Products 1

ಮಾನ್ವಿಯ ಇಸ್ಲಾಂನಗರದ ಪ್ರತಿಷ್ಠಿತ ವ್ಯಾಪಾರಿಯೊಬ್ಬರ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಣ್ಣ ಬೆರೆಸಿ ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು. ಖಾಲಿ ಜಾಗದಲ್ಲಿ ಬಣ್ಣ ಮಿಶ್ರಿತ ಬೇಳೆ, ಮಸಾಲಾ ಪದಾರ್ಥಗಳನ್ನು ಒಣಗಲು ಹಾಕಿದ್ದಾಗ ಸಾರ್ವಜನಿಕರು ಗಮನಿಸಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಆಹಾರ ಸುರಕ್ಷತಾಧಿಕಾರಿ ಗುರುರಾಜ್ ನೇತೃತ್ವದಲ್ಲಿ ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.ಇದನ್ನೂ ಓದಿ: 2 ಬಾರಿ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ರೂ ಡಿಕೆಶಿ ಭೇಟಿಗೆ ಅವಕಾಶ ನೀಡದ ರಾಹುಲ್‌!

ದಾಳಿ ವೇಳೆ 367 ಕೆಜಿ ಕಲಬೆರಕೆ ದನಿಯಾ ಕಾಳು, 152 ಕೆಜಿ ಕೆಂಪು ಮಿಶ್ರಿತ ಕಡ್ಲೆ, 220 ಕೆಜಿ ಹಳದಿ ಬಣ್ಣ ಮಿಶ್ರಿತ ಬೇಳೆ, ಪಪ್ಪಾಯಿ ಬೀಜ, ಚಕ್ಕೆ, ಕೊಬ್ಬರಿ ಪುಡಿ ಸೇರಿ ಒಟ್ಟು 842 ಕೆಜಿಯಷ್ಟು ಕಲಬೆರಕೆ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಇವುಗಳಲ್ಲಿ ಜೀವಮಾರಕ ರಾಸಾಯನಿಕ ಬಣ್ಣ ಬಳಕೆ ಮಾಡಿರುವುದು ತಿಳಿದುಬಂದಿದೆ.

Raichuru Adulterated Products 2

ಸದ್ಯ ಜಪ್ತಿಯಾದ ಆಹಾರ ಪದಾರ್ಥಗಳನ್ನ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ದಂಧೆಕೋರರು ಜಾತ್ರೆ, ಉತ್ಸವಗಳಿಗೆ ಕಲಬೆರಕೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದ್ದು, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: 24 ಗಂಟೆಯೊಳಗೆ ಭಟ್ಕಳ ಪಟ್ಟಣವನ್ನ ಸ್ಫೋಟಿಸುತ್ತೇವೆ – ಪೊಲೀಸ್‌ ಠಾಣೆಗೆ ಬೆದರಿಕೆ ಸಂದೇಶ

Share This Article