ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ (Raichuru) ಈ ಬಾರಿ ದಾಖಲೆ ಸೃಷ್ಟಿಸಿದ ಬಿಸಿಲಿನ ತಾಪಮಾನ ಜಿಲ್ಲೆಯ ಜನರನ್ನು ಮಾತ್ರ ಹೈರಾಣು ಮಾಡಿದೆ. ಆದರೆ ಮೀನುಗಾರಿಕೆಯನ್ನೇ (Fishing) ನಂಬಿ ಬದುಕುತ್ತಿದ್ದ ಮೀನುಗಾರರ ಕುಟುಂಬಗಳು ಮಾತ್ರ ಬೀದಿಗೆ ಬರುವ ಪರಸ್ಥಿತಿ ಎದುರಿಸುತ್ತಿವೆ.
Advertisement
ರಾಯಚೂರು ಜಿಲ್ಲೆ ಈ ಬಾರಿ ಹಿಂದೆಂದೂ ಕಾಣದಷ್ಟು ಗರಿಷ್ಠ 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಭೀಕರ ಬರಗಾಲ (Drought) ಎದುರಿಸುತ್ತಿದೆ. ಒಂದೆಡೆ ಜನ ಬಿಸಿಲ ಬೇಗೆಗೆ ತತ್ತರಿಸಿದ್ದರೆ ರಾಯಚೂರು ತಾಲೂಕಿನ ಮರ್ಚಡ್ ಕೆರೆ ಬಹುತೇಕ ಬತ್ತಿಹೋಗಿದ್ದು ಲಕ್ಷಾಂತರ ಮೀನುಗಳು (Fish) ಸಾವನ್ನಪ್ಪಿವೆ. 400 ಎಕರೆ ಪ್ರದೇಶದ ಕೆರೆ ಬೇಸಿಗೆ ಹಾಗೂ ಬರಗಾಲಕ್ಕೆ ಬತ್ತಿಹೋಗಿದೆ. ಪ್ರತೀ ವರ್ಷ ಇಲ್ಲಿನ ಮೀನುಗಾರರ ಸಂಘದ ಎಲ್ಲಾ ಸದಸ್ಯರು ಸೇರಿ ಸುಮಾರು 30 ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಿದ್ದರು. ಆದರೆ ಈ ಬಾರಿ ಕನಿಷ್ಠ ಖರ್ಚು ಸಹ ವಾಪಸ್ ಬಂದಿಲ್ಲ, ಬದಲಾಗಿ ಮೀನುಗಾರರು ಸಾಲಗಾರರಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು
Advertisement
Advertisement
15 ಲಕ್ಷ ರೂ. ಖರ್ಚುಮಾಡಿ ಮೀನಿನ ಮರಿಗಳನ್ನ ಬಿಟ್ಟಿದ್ದರು. ಅಲ್ಲದೆ ಬುಟ್ಟಿ, ಬಲೆ ,ಇತರೆ ಸಾಮಗ್ರಿಗಳಿಗಾಗಿ ಮಾಡಿದ ಸಾಲ ತೀರಿಸಲು ಆಗದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆಲ್ಲಾ ಕೆಲ ಫ್ಯಾಕ್ಟರಿಗಳಿಂದ ಬರುವ ಕೆಮಿಕಲ್‌ನಿಂದ ಸಾಮಾನ್ಯವಾಗಿ ಕೆರೆಯಲ್ಲಿನ ಮೀನುಗಳು ಸಾಯುತ್ತಿದ್ದವು. ಆದರೆ ಈಗ ಕೆರೆಯಲ್ಲಿ ನೀರು ಕಡಿಮೆಯಿದ್ದು ಬಿಸಿಲಿನ ತಾಪಮಾನ ಹೆಚ್ಚಳದಿಂದ ಮೀನು ಸಾವನ್ನಪ್ಪಿವೆ. ಇಲ್ಲಿನ ಗ್ರಾಮಸ್ಥರು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಈ ಬಾರಿ ಹೆಚ್ಚಾದ ತಾಪಮಾನದಿಂದ ರಾಶಿ ರಾಶಿ ಮೀನುಗಳು ಸತ್ತು ಹೋಗಿದ್ದು, ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ
Advertisement
ಗ್ರಾಮದ ಸುಮಾರು 80 ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿವೆ. ಈ ವರ್ಷ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದ್ದಕ್ಕೆ ಕೆರೆಯಲ್ಲಿ ನೀರಿಲ್ಲದಂತಾಗಿದೆ. ಅಲ್ಪಸ್ವಲ್ಪ ಜಮೀನಿದ್ದ ಮೀನುಗಾರರಂತೂ ಅತ್ತ ಜಮೀನಿನಲ್ಲೂ ಬೆಳೆ ಬಂದಿಲ್ಲ ಇತ್ತ ಕೆರೆಯಲ್ಲೂ ಮೀನು ಉಳಿಯದೇ ದೊಡ್ಡ ಸಾಲದ ಹೊರೆಯನ್ನೇ ಹೊತ್ತುಕೊಂಡಿದ್ದಾರೆ. ಮೀನು ಹಿಡಿಯುವ ಕೂಲಿ ಕೆಲಸ ಮಾಡುತ್ತಿದ್ದವರಿಗೂ ಈಗ ಉದ್ಯೋಗವಿಲ್ಲದಂತಾಗಿದೆ.
ಕಳೆದ 6 ವರ್ಷಗಳಿಂದ ಕೆರೆ ಈ ಮಟ್ಟಕ್ಕೆ ಖಾಲಿಯಾಗಿರಲಿಲ್ಲ. ಬರಗಾಲ ಹಾಗೂ ವಿಪರೀತ ಬಿಸಿಲಿನಿಂದ ನೀರಿಲ್ಲದಂತಾಗಿದೆ. ಇದುವರೆಗೂ ರಾಶಿ ರಾಶಿ ಮೀನುಗಳು ಸತ್ತಾಗ ಒಂದು ಬಾರಿಯೂ ಪರಿಹಾರ ಸಿಕ್ಕಿಲ್ಲ. ಆದ್ರೆ ಈ ಬಾರಿ ತೀವ್ರ ಬರಗಾಲ ಇರುವುದರಿಂದ ಸರ್ಕಾರ ಪರಿಹಾರ ನೀಡಬೇಕು ಅಂತ ಮೀನುಗಾರರು ಒತ್ತಾಯಿಸಿದ್ದಾರೆ.