– ಸಿಸಿಟಿವಿ ಡಿವಿಆರ್ ಮಾಯ
ರಾಯಚೂರು: ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವಾಗಲೇ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ (Devadurga Taluka Hospital) ನಡೆದಿದೆ.
24*7 ಕಾರ್ಯನಿರ್ವಹಿಸುವ ತಾಲೂಕು ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳು ಕಳ್ಳತನವಾಗಿದ್ದು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವಾಗಲೇ ಈ ಘಟನೆ ನಡೆದಿದೆ. ಸಿಸಿಟಿವಿ (CCTV) ಡಿವಿಆರ್ ಕೂಡ ಮಾಯವಾಗಿದೆ.ಇದನ್ನೂ ಓದಿ:ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ
ಪ್ರಯೋಗಾಲಯದ ಬೀಗ ಹಾಕದೇ ಸಿಬ್ಬಂದಿ ಹಾಗೆ ಬಿಟ್ಟಿದ್ದರು. ಈ ವೇಳೆ ಹಿಮೋಗ್ಲೋಬಿನ್ ಲೆವೆಲ್, ಆಕ್ಸಿಜನ್ ಲೆವೆಲ್ ಚೆಕ್ ಮಾಡುವ ಮಷಿನ್ ಹಾಗೂ ಎಲೆಕ್ಟ್ರೋಲೈಟ್ ತಪಾಸಣೆ ಸೇರಿದಂತೆ ವಿವಿಧ ರಕ್ತ ಪರೀಕ್ಷೆಗಳನ್ನು (Blooad Test Machine) ಮಾಡಲು ಬಳಸುತ್ತಿದ್ದ ಮೂರು ದೊಡ್ಡ ಯಂತ್ರಗಳನ್ನು ಕಳ್ಳತನ ಮಾಡಿದ್ದಾರೆ. ಸುಮಾರು 10 ರಿಂದ 15 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳು ಕಳ್ಳತನವಾಗಿದ್ದು, ಸಿಸಿಟಿವಿ ಡಿವಿಆರ್‌ನ್ನು ಕೂಡ ಕದ್ದುಕೊಂಡು ಹೋಗಿದ್ದಾರೆ.
ಅ.12, 13ರ ನಡುವೆ ಘಟನೆ ನಡೆದಿದ್ದು, ಮುಖ್ಯ ವೈದ್ಯಾಧಿಕಾರಿ ಡಾ.ಶಿವಾನಂದ ತಡವಾಗಿ ಅ.16 ರಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಂದೊಂದು ಯಂತ್ರೋಪಕರಣಗಳನ್ನು ಹೊತ್ತೊಯ್ಯಲು ಕನಿಷ್ಠ ನಾಲ್ಕು ಜನ ಬೇಕಿದ್ದು, ಈ ಕಳ್ಳತನದ ಹಿಂದೆ ನಾನಾ ಅನುಮಾನಗಳು ಹುಟ್ಟಿಕೊಂಡಿವೆ.
ಒಂದೆಡೆ ಆಸ್ಪತ್ರೆಯ ಒಳಗಿನವರ ಸಹಾಯದಿಂದ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಂದೆಡೆ ಖಾಸಗಿ ಪ್ರಯೋಗಾಲಯಗಳ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಆದರೆ ಹಿಂದುಳಿದ ಪ್ರದೇಶದಲ್ಲಿನ ಆಸ್ಪತ್ರೆಯಲ್ಲಿ ಕಳ್ಳತನ ನಡೆದಿರುವುದಕ್ಕೆ ಬಡ ರೋಗಿಗಳ ಕಡೆಯವರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಪ್ರಕರಣ ಸಂಬಂಧ ದೇವದುರ್ಗ ಠಾಣೆಯ ಪೊಲೀಸರು (Devadurga Police Station) ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕಾರವಾರ| ಹಳಿಯಾಳದಲ್ಲಿ ವಿದ್ಯುತ್ ಅವಘಡ – ಮಳಿಗೆ, ಮನೆಗಳು ಬೆಂಕಿಗಾಹುತಿ