ರಾಯಚೂರು: ಸರ್ಕಾರಿ ಉರ್ದು ಶಾಲೆಯ ಮಕ್ಕಳಿಗೆ ಹೊಸ ಪದ್ದತಿಯಲ್ಲಿ ಕನ್ನಡ ಪಾಠಮಾಡಿ ಅಚ್ಚರಿಯ ಫಲಿತಾಂಶಗಳನ್ನು ತಂದುಕೊಡುವ ಮೂಲಕ ವಿಭಿನ್ನ ಪಾಠಶೈಲಿಯ ಶಿಕ್ಷಕರೆನಿಸಿಕೊಂಡಿರುವ ರಾಯಚೂರಿನ ನಿವೃತ್ತ ಕನ್ನಡ ಶಿಕ್ಷಕ ಸೈಯದ್ ಗೌಸ್ ಮೊಹಿಯುದ್ದಿನ್ ಪೀರಜಾದೆ ಕುರಿತ ಪುಸ್ತಕ ಇಂದು ನಗರದಲ್ಲಿ ಬಿಡುಗಡೆಯಾಯಿತು.
Advertisement
ಯುವ ಬರಹಗಾರ ಈರಣ್ಣ ಬೆಂಗಾಲಿ ಬರೆದಿರುವ “ಅಪರೂಪದ ಕನ್ನಡ ಮೇಷ್ಟ್ರು” ಪುಸ್ತಕವನ್ನು ನಗರದ ಟ್ಯಾಗೋರ್ ಸಭಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಮ್ಯಾದರ್ ಲಲಿತಾಕಲಾ ಪ್ರತಿಷ್ಠಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಿವೃತ್ತಿಯಾದರು ಇನ್ನೂ ಸರಳ ರೀತಿಯಲ್ಲಿ ಮಕ್ಕಳಿಗೆ, ಕನ್ನಡ ಕಲಿಯುವ ಆಸಕ್ತಿ ಇರುವ ಅನ್ಯ ಭಾಷಿಕರಿಗಾಗಿ ಸೈಯದ್ ಗೌಸ್ ಮೊಹಿಯುದ್ದಿನ್ ಪೀರಜಾದೆ ಸಂಶೋಧನೆ ನಡೆಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
Advertisement
Advertisement
ಸಂಜ್ಞೆಗಳ ಮೂಲಕ ಕನ್ನಡ ಕಲಿಸುವ ಇವರ ಭೋದನಾ ಕ್ರಮ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು. ಪೀರಜಾದೆಯವರ ಅಪರೂಪದ ಶಿಕ್ಷಣ ಸೇವೆಯನ್ನು ಗುರುತಿಸಿ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಈಗ ಅವರ ಸಾಧನೆ ಕುರಿತು ಪುಸ್ತಕವೊಂದು ಬಿಡುಗಡೆಯಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್
Advertisement
ಪುಸ್ತಕ ಬಿಡುಗಡೆ ಕಾರ್ಯಕ್ರಮ ಆರಂಭದಲ್ಲಿ ಪುನೀತ್ ರಾಜ್‍ಕುಮಾರ್ ಅಗಲಿಕೆ ಹಿನ್ನೆಲೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಹಾಂತೇಶ್ ಮಸ್ಕಿ, ವೀರಹನುಮಾನ್, ಶಿಕ್ಷಣ ಕಿರಣ ಸಂಸ್ಥೆ ಗೌರವಾಧ್ಯಕ್ಷ ಜಯಣ್ಣ, ರಾಮಣ್ಣ ಮ್ಯಾದರ್ ಸೇರಿದಂತೆ ಹಲವರು ಭಾಗವಹಿಸಿದ್ದರು.