ರಾಯಚೂರು: ನಗರದ ದೇವರಾಜ್ ಅರಸು ಕಾಲೋನಿಯಲ್ಲಿ ಮನೆಯೊಂದಕ್ಕೆ ನುಗ್ಗಿ ಅಲ್ಮೇರಾ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ರಾತ್ರಿ ಮನೆಯವರೆಲ್ಲರೂ ಮಲಗಿದ ವೇಳೆಯಲ್ಲಿ ಮನೆ ಬೀಗವನ್ನ ಮುರಿದು ಒಳ ನುಗ್ಗಿ ಯಾರಿಗೂ ಎಚ್ಚರವಾಗದಂತೆ ಕೃತ್ಯ ಎಸಗಲಾಗಿದೆ.
ರಮೇಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ,ಮನೆಯಲ್ಲಿ ಎಲ್ಲರೂ ಇದ್ದಾಗಲೂ ಖದೀಮ ಕಳ್ಳರು ಕೈಚಳಕ ತೋರಿಸಿದ್ದಾರೆ. 40 ಗ್ರಾಂ ಚಿನ್ನ ಹಾಗೂ 70 ಸಾವಿರ ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ಬೆಳಗ್ಗೆ ಕಳ್ಳತನ ಬೆಳಕಿಗೆ ಬಂದಿದ್ದು ಮನೆಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಪಶ್ಚಿಮ ಠಾಣೆ ಸಿಪಿಐ ಉಮೇಶ್ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.