– ಆತಂಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ
ರಾಯಚೂರು: ಕೋವಿಡ್-19 ಐಸೋಲೇಷನ್ ವಾರ್ಡ್ ತೆರೆಯಲಾಗಿರುವ ರಾಯಚೂರಿನ ಓಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಆತಂಕ ಎದುರಾಗಿದೆ. ಮಾಸ್ಕ್ ಕೊರತೆ ಕಾರಣವೊಡ್ಡಿ ಇಲ್ಲಿನ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಯಾವುದನ್ನೂ ನೀಡಿಲ್ಲ. ಕೊವಿಡ್ ಐಸೋಲೇಷನ್ ವಾರ್ಡ್ ಇರುವ ಆಸ್ಪತ್ರೆಯ ಸಿಬ್ಬಂದಿಗೇ ಮಾಸ್ಕ್ ನೀಡಲು ಆಗಿಲ್ಲ ಅಂದ್ರೆ ಉಳಿದವರಿಗೆ ಯಾವ ರೀತಿಯ ರಕ್ಷಣೆಯಿದೆ ಅನ್ನೋ ಪ್ರಶ್ನೆ ಎದುರಾಗಿದೆ.
Advertisement
ಆಸ್ಪತ್ರೆಯ ಆವರಣದ ಕಟ್ಟಡದಲ್ಲೇ ಕೋವಿಡ್-19 ಐಸೋಲೆಷನ್ 16 ವಾರ್ಡ್ ತೆರೆಯಲಾಗಿದೆ. ಆದರೆ ಆಸ್ಪತ್ರೆ ಔಷಧಿ ಅಂಗಡಿಯಲ್ಲೂ ಮಾಸ್ಕ್ ಸಂಗ್ರಹವಿಲ್ಲ. ಆಸ್ಪತ್ರೆಯ ಸುಮಾರು 65 ಸಿಬ್ಬಂದಿಗೆ ಎರಡು ತಿಂಗಳ ವೇತನವನ್ನು ಸಹ ನೀಡಿಲ್ಲ. ಹೀಗಾಗಿ ಇಲ್ಲಿನ ಸಿಬ್ಬಂದಿ ಪರದಾಡುವಂತಾಗಿದೆ.
Advertisement
Advertisement
ಮಾಸ್ಕ್, ವೇತನದ ಬಗ್ಗೆ ಓಪೆಕ್ ವಿಶೇಷಾಧಿಕಾರಿ ಡಾ.ನಾಗರಾಜ್ ಗದ್ವಾಲ್ ರನ್ನ ಕೇಳಿದರೆ ಹಾರಿಕೆ ಉತ್ತರವನ್ನ ನೀಡುತ್ತಿದ್ದಾರೆ. ಎಲ್ಲದಕ್ಕೂ ರಿಮ್ಸ್ ನಿರ್ದೇಶಕರನ್ನ ಕೇಳಿ ಅಂತ ಸಿಬ್ಬಂದಿ ಬಗ್ಗೆ ನಿಷ್ಕಾಳಜಿ ವಹಿಸಿದ್ದಾರೆ. ರಿಮ್ಸ್ ನಿಂದ ಮಾಸ್ಕ್ ನೀಡಿದರೆ ಮಾತ್ರ ಇಲ್ಲಿನ ಸಿಬ್ಬಂದಿಗೆ ಮಾಸ್ಕ್ ನೀಡಲಾಗುತ್ತೆ. ಓಪೆಕ್ ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಪಕ್ಕದ ಆಂಧ್ರ ತೆಲಂಗಾಣ ರಾಜ್ಯದಿಂದಲೂ ರೋಗಿಗಳು ಬರುತ್ತಾರೆ. ಹೀಗಾಗಿ ನಮಗೆ ರಕ್ಷಣೆ ಬೇಕಿದೆ ಅಂತ ಓಪೆಕ್ ಸಿಬ್ಬಂದಿ ಒತ್ತಾಯಿಸಿದ್ದಾರೆ.