ರಾಯಚೂರು: ಭ್ರಷ್ಟಾಚಾರ ಸಾಬೀತು ಹಿನ್ನೆಲೆ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮ ಪಂಚಾಯಿತಿ ಪಿಡಿಓ ಸರ್ಕಾರಿ ಸೇವೆಯಿಂದ ವಜಾಗೊಂಡಿದ್ದಾರೆ. ಶರಣಪ್ಪ ಸರ್ಕಾರಿ ಸೇವೆಯಿಂದ ವಜಾಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.
2010-11 ರ ಅವಧಿಯಲ್ಲಿ ಮಾನ್ವಿ ತಾಲೂಕಿನ ಕಪಗಲ್ ಗ್ರಾಪಂ ಪಿಡಿಓ ಆಗಿದ್ದಾಗ ನಡೆದ ಭ್ರಷ್ಟಾಚಾರ ಹಿನ್ನೆಲೆ ಈಗ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ಸರ್ಕಾರಕ್ಕೆ 34,77,999 ರೂ. ನಷ್ಟ ಉಂಟು ಮಾಡಿದ ಆರೋಪ ಪ್ರಕರಣದಲ್ಲಿ ಭ್ರಷ್ಟಾಚಾರ ತನಿಖೆಯಲ್ಲಿ ಧೃಡಪಟ್ಟ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಓ ನೂರ್ ಜಹಾರ್ ಖಾನ್ಂ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪಿಡಿಓ ವಿರುದ್ಧ ಪ್ರಕರಣ ದಾಖಲಿಸಿ, ಭ್ರಷ್ಟಾಚಾರದ ಹಣ ವಸೂಲಿಗೂ ಸೂಚಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರೋದು ಗ್ಯಾರಂಟಿ; ಆದರೆ…!
Advertisement
Advertisement
ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಯಮ ಮೀರಿ ಕ್ರಿಯಾ ಯೋಜನೆ ತಯಾರಿಕೆ, ಕಾಮಗಾರಿ ಅನುಷ್ಠಾನ. ಕ್ರಿಯಾ ಯೋಜನೆಯಲ್ಲಿ ಇಲ್ಲದ ಜಮೀನುಗಳಲ್ಲಿ ಕಾಮಗಾರಿ ಅನುಷ್ಠಾನ ಹಾಗೂ ಕಡಿಮೆ ಕೆಲಸ ಮಾಡಿ ಹೆಚ್ಚು ಹಣ ಡ್ರಾ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.