ರಾಯಚೂರು: 2023-24 ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗೆ ರಾಯಚೂರಿನ ಪಬ್ಲಿಕ್ ಹೀರೋ ಈರಣ್ಣ ಕೋಸಗಿ (Kosgi Eranna) ಆಯ್ಕೆಯಾಗಿದ್ದಾರೆ. ಕಳೆದ 19 ವರ್ಷಗಳಿಂದ ಪರಿಸರ ರಕ್ಷಣೆ, ಸಸಿಗಳನ್ನ ನೆಟ್ಟು ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಈರಣ್ಣ ಕೋಸಗಿ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದೆ.
2015 ರಲ್ಲಿ ಈರಣ್ಣ ಕೋಸಗಿ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಹೀರೋ (Public Hero) ಕಾರ್ಯಕ್ರಮದಲ್ಲಿ ಈರಣ್ಣ ಭಾಗವಹಿಸಿದ್ದರು. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟಿರುವ ಈರಣ್ಣ, ಉತ್ತರ ವಲಯ ವ್ಯಕ್ತಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಜುಲೈ 3 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಹಾಗೂ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
Advertisement
Advertisement
ಅರಣ್ಯ ಜೀವಿ ಪರಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ಕೊಡಮಾಡುವ ಪ್ರಶಸ್ತಿಗೆ ಬಿಸಿಲೂರಿನ ಪರಿಸರ ಪ್ರೇಮಿ ಆಯ್ಕೆಯಾಗಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಲಾಗುತ್ತದೆ. ತಮಗೆ ಬರುವ ನಗದು ಹಣದಲ್ಲಿ ಅರ್ಧದಷ್ಟನ್ನ ಸಸಿ ನೆಡಲು, ಪರಿಸರ ರಕ್ಷಣೆಗೆ ಬಳಸುವುದಾಗಿ ಈರಣ್ಣ ಕೋಸಗಿ ತಿಳಿಸಿದ್ದಾರೆ. ಇದನ್ನೂ ಓದಿ: ನೀಟ್ ಚರ್ಚೆಗೆ ಅವಕಾಶ ಮಾಡಿಕೊಡಿ – ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ!