ರಾಯಚೂರು: ಆನ್‍ಲೈನ್ ಆ್ಯಪ್ ಓಎಲ್‍ಎಕ್ಸ್ ನಲ್ಲಿ ಹೋಂಡಾ ಆ್ಯಕ್ಟಿವಾ ಖರೀದಿಸಲು ಹೋಗಿ ರಾಯಚೂರಿನ ಯುವಕ ಮೋಸಹೋಗಿದ್ದಾರೆ.
ಯುವಕ ವಿಜಯ್‍ರಾಜ್ ಮೇದಾ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಲು ಓಎಲ್‍ಎಕ್ಸ್ ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಬೆಂಗಳೂರಿನ ವಿಕಾಸ್ ಪಾಟೀಲ್ ಎಂಬ ಹೆಸರಿನಲ್ಲಿ ಆ್ಯಕ್ಟಿವ್ ಹೋಂಡಾ ಫೋಟೋ ಹಾಕಿ, ಮಾರಾಟಕ್ಕಿದೆ ಅಂತ ತಿಳಿಸಿದ್ದ. ಕಡಿಮೆ ಬೆಲೆಗೆ ಸಿಗುತ್ತಿದೆ ಅಂತ ವಿಜಯರಾಜ್ ಕರೆ ಮಾಡಿ ಮಾತನಾಡಿದ್ದರು.
Advertisement
Advertisement
ನಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ. ಹೀಗಾಗಿ ಬೈಕ್ ಮಾರುತ್ತಿದ್ದೇನೆ. ನಾನು ಆರ್ಮಿ ಕ್ಯಾಂಪ್‍ನಿಂದ ಗಾಡಿ ಹೊರತರಲು ಕಾರಣ ಕೊಡಬೇಕು. ಹಾಗಾಗಿ ಮೊದಲು ದುಡ್ಡು ಹಾಕಿ ಎಂದು ವಿಕಾಸ್ ಪಾಟೀಲ್ ಹೇಳಿದ್ದಾನೆ. ಆತನ ಮಾತು ನಂಬಿದ ವಿಜಯ್‍ರಾಜ್ ಹಂತ ಹಂತವಾಗಿ 48 ಸಾವಿರ ರೂ. ಫೋನ್ ಪೇ ಮೂಲಕ ಹಣ ಪಾವತಿಸಿ ಮೋಸ ಹೋಗಿದ್ದಾರೆ.
Advertisement
ವಾಹನ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ಬಯಲಾಗಿದೆ. ವಿಕಾಸ್ ಪಾಟೀಲ್ ವಿರುದ್ಧ ರಾಯಚೂರು ಸೈಬರ್ ಕ್ರೈಂ ಠಾಣೆಯಲ್ಲಿ ವಿಜಯ್‍ರಾಜ್ ದೂರು ದಾಖಲಿಸಿದ್ದಾರೆ. ನನ್ನಂತೆ ಬೇರೆ ಯಾರೂ ಮೋಸ ಹೋಗಬಾರದು ಅಂತ ವಂಚನೆಗೊಳಗಾದ ಯುವಕ ಮನವಿ ಮಾಡಿದ್ದಾರೆ.