ರಾಯಚೂರು: ತುಂಗಭದ್ರಾ ಜಲಾಶಯದಿಂದ ಎರಡು ಲಕ್ಷ ಕ್ಯೂಸೆಕ್‍ನಷ್ಟು ಪ್ರಮಾಣದ ನೀರು ನದಿಗೆ ಹರಿಸಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಿಂಧನೂರು, ಮಾನ್ವಿ ತಾಲೂಕಿನಲ್ಲಿ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ಕೋಟ್ಯಾಂತರ ರೂಪಾಯಿ ಬೆಳೆ ನಷ್ಟವಾಗಿದೆ. ಜಮೀನಿನಲ್ಲಿನ ಪಂಪ್ ಸೆಟ್‍ಗಳು ಸಹ ಮುಳುಗಡೆಯಾಗಿದೆ. ನದಿ ಪಾತ್ರದ ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟಿವೆ. ಮುನ್ನೆಚ್ಚರಿಕೆಯನ್ನ ನೀಡದೆ ಏಕಾಏಕಿ ಭಾರೀ ಪ್ರಮಾಣದ ನೀರನ್ನ ತುಂಗಭದ್ರಾ ನದಿಗೆ ಹರಿಸಿರುವುದಕ್ಕೆ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ವಿ ತಾಲೂಕಿನ ಹೆಡವಿಯಾಳ, ಚೀಕಲಪರ್ವಿ, ಮದ್ಲಾಪುರ, ಕಾತರಕಿ ಗ್ರಾಮದ ಭತ್ತ ಹಾಗೂ ಹತ್ತಿಬೆಳೆ ನದಿಪಾಲಾಗಿದೆ. ಚೀಕಲಪರ್ವಿಯಲ್ಲಿರುವ ವಿಜಯದಾಸರ ಕಟ್ಟೆ ಜಲಾವೃತವಾಗಿದೆ. ವಿಜಯದಾಸರು ತಪ್ಪಸ್ಸು ಮಾಡಿದ ಸ್ಥಳ ಈಗ ಬಹುತೇಕ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುರು ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ದಂಡೆಯಲ್ಲಿರುವ ಮಠದ ಆವರಣದಲ್ಲಿನ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾಯರ ಆರಾಧನೆ ಹಿನ್ನೆಲೆ ಸ್ನಾನ ಘಟ್ಟದಲ್ಲಿ ಮಾಡಿದ್ದ ವ್ಯಸ್ಥೆಗಳೆಲ್ಲಾ ಅಸ್ತವ್ಯಸ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv