ರಾಯಚೂರು: ಹಿಜಬ್ ಮತ್ತು ಕೇಸರಿ ಶಾಲು ಸಂಘರ್ಷ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಹಿಜಬ್ ಬಿಟ್ಟು ಡ್ರೆಸ್ ಕೋಡ್ ನಿಯಮ ಪಾಲಿಸಿ ರಾಯಚೂರಿನ ಮುಸ್ಲಿಂ ವಿದ್ಯಾರ್ಥಿನಿಯರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಧರ್ಮದ ಜೊತೆ ವಿದ್ಯಾಭ್ಯಾಸವೂ ಮುಖ್ಯ, ಓದಿಗೆ ಹೆಚ್ಚು ಒತ್ತುಕೊಡುತ್ತೇವೆ ಅಂತ ಕಾಲೇಜಿಗೆ ಹಾಜರಾಗಿದ್ದಾರೆ.
Advertisement
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಬ್ ಬಿಟ್ಟು ಸಮವಸ್ತ್ರ ಧರಿಸಿ ಕಾಲೇಜಿಗೆ ಹಾಜರಾಗಿದ್ದಾರೆ. ಹಿಜಬ್ ಧರಿಸಿ ಬಂದವರು ಪ್ರತ್ಯೇಕ ಕೋಣೆಯಲ್ಲಿ ತೆಗೆದು ಎಲ್ಲರಂತೆ ಕ್ಲಾಸ್ ಗೆ ಹಾಜರಾಗಿದ್ದಾರೆ. ನಾವು ಎಲ್ಲರೂ ಒಂದೇ ನ್ಯಾಯಾಲಯದ ನಿಯಮ ಪಾಲನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳು ಹಿಜಬ್ ತೆಗೆಯಲು ನಿರಾಕರಿಸಿ ಕಾಲೇಜಿಗೆ ಗೈರುಹಾಜರಾಗಿದ್ದಾರೆ. ಇದನ್ನೂ ಓದಿ: ಪಂಜದಲ್ಲಿ ಎಗ್ಗಿಲ್ಲದೇ ನಡೀತಿದೆ ಅಕ್ರಮ ಮರಳುಗಾರಿಕೆ – ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ
Advertisement
Advertisement
ಹಿಜಬ್ ಗಲಾಟೆಯಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ನಮ್ಮನ್ನು ನಮ್ಮ ಪಾಡಿಗೆ ಓದಲು ಬಿಡಿ ಎಲ್ಲರೂ ನಾವು ಒಂದಾಗಿದ್ದೇವೆ ಅಂತ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. ಹಿಜಬ್ ವಿವಾದ ನಡುವೆಯೂ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದು, ಪಾಠಗಳು ಎಂದಿನಂತೆ ನಡೆಯುತ್ತಿರುವುದಕ್ಕೆ ಇತರೆ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಲೆಯ ಸಂಧಾನ ಯಶಸ್ವಿ – ಹಿಜಬ್ ತೆಗೆಸಲು ಒಪ್ಪಿದ ಪೋಷಕರು