ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಪ್ರಕರಣಕ್ಕೆ ಸಂಬಂಧಿಸಿದ ಬಂಧಿತನಾಗಿರುವ ಆರೋಪಿ ಸುದರ್ಶನ್ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ.
ಟ್ವಿಸ್ಟ್ ನೀಡುತ್ತಾ ಸುದರ್ಶನ್ ಹೇಳಿಕೆ?
ನಾನು ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ಪ್ರೀತಿ ಮಾಡುತ್ತಿದ್ದೆ. ಆಕೆಯೂ ಸಹ ನನ್ನನ್ನು ಪ್ರೀತಿಸುತ್ತಿದ್ದಳು. ಆದ್ರೆ ನಮ್ಮಿಬ್ಬರ ಪ್ರೀತಿ ಕೆಲವೇ ದಿನಗಳಲ್ಲಿ ಮುರಿದು ಬಿದ್ದಿತ್ತು. ಹಾಗಾಗಿ ನಾನು ಆಕೆಯನ್ನು ಪೀಡಿಸೋದಕ್ಕೆ ಆರಂಭಿಸಿದ್ದೆ. ಒಮ್ಮೆ ನಾನು ಆಕೆಗೆ ರಸ್ತೆಯಲ್ಲಿ ಹಲ್ಲೆ ಮಾಡುವಾಗ ವಿದ್ಯಾರ್ಥಿನಿ ತಂದೆಯ ಬಳಿ ಸಿಕ್ಕಿ ಬಿದ್ದಿದ್ದೆ. ತಂದೆಯದೇರು ಗಲಾಟೆ ನಡೆದಿದ್ದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ನನಗೆ ಆಕೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಸುದರ್ಶನ್ ಪೊಲೀಸರ ಹೇಳಿಕೆ ದಾಖಲಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭ್ಯವಾಗಿದೆ.
Advertisement
Advertisement
ಇದೇ ಪ್ರಕರಣದ ಸಂಬಂಧ ಠಾಣೆಯ ರಾಯಚೂರು ನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಬಿ.ಮರಿಯಮ್ ಹಾಗೂ ಸದರ್ ಬಜಾರ್ ಠಾಣೆಯ ಪೇದೆ ಆಂಜನೇಯ ಅಮಾನತುಗೊಂಡಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಮಗಳು ನಾಪತ್ತೆಯಾದ ಕುರಿತು ದೂರು ದಾಖಲಿಸಲು ಏಪ್ರಿಲ್ 13ರಂದು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಪಿಎಸ್‍ಐ ಬಿ.ಬಿ.ಮರಿಯಮ್ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ.