ರಾಯಚೂರು: ರಕ್ತದಾನ ಮಾಡುವ ಮೂಲಕ ರಾಯಚೂರು ಎಸ್‍ಪಿ ಡಾ.ವೇದಮೂರ್ತಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಭವನದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಈ ವೇಳೆ ನೂರಾರು ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.
48ನೇ ಹುಟ್ಟು ಹಬ್ಬ ಆಚರಿಸಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ನನ್ನ ಹುಟ್ಟುಹಬ್ಬ ಕೇವಲ ನೆಪ ಮಾತ್ರ, ರಕ್ತದಾನ ಮಹಾದಾನ ಎಂದು ಹೇಳಿದರು. ಭಾರತೀಯ ವೈದ್ಯಕೀಯ ಸಂಘ, ರಿಮ್ಸ್ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‍ಪಿ ಹುಟ್ಟು ಹಬ್ಬ ನಿಮಿತ್ತ ರಕ್ತದಾನ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಗಳು ಖುಷಿ ವ್ಯಕ್ತಪಡಿಸಿದರು.